ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಯೋತ್ಪಾದಕ ಶತ್ರುರಾಷ್ಟ್ರ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರದ ಮೂಲಕ ನಿರಂತರವಾಗಿ ದಾಳಿ ಮಾಡಿ, ಉಗ್ರ ಪಾಕಿಸ್ತಾನಿಗಳನ್ನು ಹತ್ತಿಕ್ಕುತ್ತಿರುವ ಭಾರತದ ಸೇನಾ ಪಡೆಗಳಿಗೆ ಇನ್ನಷ್ಟು ಶಕ್ತಿ ಬರಲಿ, ಯಶಸ್ಸು ದೊರೆಯಲಿ ಎಂದು ನಗರದ ಗಂಜ್ ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ಕಲಬುರಗಿ ಉತ್ತರ ಮಂಡಲದಿಂದ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಿಜೆಪಿ ಮಹಾನಗರ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ನೂರಾರು ಬಿಜೆಪಿ ಕರ‍್ಯರ‍್ತರು ಭಾಗವಹಿಸಿ, ದೇಶದ ಸೈನಿಕರಿಗೆ ಬಲ ಬರಲಿ, ದೃಢ ನರ‍್ಧಾರಗಳನ್ನು ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನು ಆತ್ಮಸ್ಥೆರ‍್ಯ, ಶಕ್ತಿ ದೊರೆಯಲಿ ಎಂದು ಪ್ರರ‍್ಥನೆ ಸಲ್ಲಿಸಲಾಯಿತು.
ಪಣಿ ದಾಳಿ ನಡೆಸಿ, ಶತ್ರು ರಾಷ್ಟ್ರದಿಂದ ಪ್ರತಿರೋಧ ಎದುರಿಸುತ್ತ ಯುದ್ಧ ದ ಕಣದಲ್ಲಿರುವ ಎಲ್ಲ ಯೋಧರಿಗೆ ರಕ್ಷಣೆ ದೊರೆಯಲಿ, ಯಾವುದೇ ಅಪಾಯಗಳು ಆಗದೇ ದೇಶದ ಪಾಕಿಸ್ತಾನದ ಹೆಡೆಮುರಿ ಕಟ್ಟಲಿ ಎಂದು ಸಾಮೂಹಿಕವಾಗಿ ಪ್ರರ‍್ಥನೆ ಸಲ್ಲಿಸಿದರು. ಪಾಕಿಸ್ತಾನದ ಪ್ರತಿದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ, ಮತ್ತು ಸರ‍್ವಜನಿಕರಿಗೆ ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಯಿತು.
ಪ್ರಮುಖರಾದ ಉಮೇಶ ಪಾಟೀಲ್, ಸಂತೋಷ ಲಂಗರ, ಎಸ್.ಎಚ್.ತಡಕಲ್, ವರದಾ ಶಂಕರ ಶೆಟ್ಟಿ, ಸಚಿನ್ ಕಡಗಂಚಿ, ಅಶೋಕ ಮಾನಕರ, ಬಸವರಾಜ ಮಂಗಲಗಿ, ಮಲ್ಲಿಕರ‍್ಜುನ ಕಕಳಮೇಳಿ, ಮಲ್ಲಿಕರ‍್ಜುನ ಮಾನಕರ, ವಿನೋದಕುಮಾರ ನಿಂಗದೆ, ಸಂಜುಕುಮಾರ ಮುಗುಳಿ, ವಿಜಯಕುಮಾರ ಬಿರಾದಾರ, ಸಂಗಬಸಪ್ಪ ಹಿರೇಗೌಡ್ರು, ಸಂಗಮೇಶ ಮನ್ನಳ್ಳಿ, ಶಾಂತಕುಮಾರ ದುಧನಿ, ಮಂಜುನಾಥ ಚಿಲಶೆಟ್ಟಿ, ರವಿಕುಮಾರ ಸುಲೇಪೇಟ್, ಭೀಮಶಾ ಪೂಜಾರಿ, ಶರಣು ಸಿಗಿ, ಶಿವಕುಮಾರ ಕಾಳಗಿ, ಸಂತೋಷ ಹುಡುಗಿ, ಮಹೇಶ ಚವ್ಹಾಣ್, ವಿಜಯಕುಮಾರ ಮಡಿವಾಳ, ಜಗದೀಶ ಉದನೂರು ಇತರರಿದ್ದರು.
ಯೋಧ, ಮೋದಿಗೆ ಶಕ್ತಿ ಬರಲಿ
ದೇಶದ ಸೈನಿಕರು ತಮ್ಮ ಪ್ರಾಣ ಪಣಕ್ಕೆ ಇಟ್ಟು, ಗಡಿಯಲ್ಲಿ ಹೋರಾಟ ಮಾಡುತ್ತಿದ್ದು, ಅವರೆಲ್ಲರಿಗೂ ಒಳಿತಾಗಬೇಕು. ಎಲ್ಲರೂ ಸುರತವಾಗಿ ಇರಬೇಕು. ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಬರಲಿ ಎಂದು ಹನುಮಾನ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಕಳೆದ ಎರಡ್ಮೂರು ದಿನದಿಂದ ಗಡಿಯಲ್ಲಿ ಪಾಕಿಸ್ತಾನದ ದಾಳಿಗೆ ತಕ್ಕ ಉತ್ತರ ನೀಡಿ, ಅದರ ಒಳಹೊಕ್ಕು ಹೊಡೆಯುತ್ತಿರುವ ಸೈನಿಕರು ಯಶಸ್ವಿಯಾಗಿ ಕರ‍್ಯಾಚರಣೆ ನಡೆಸಿದ್ದು, ಭವಿಷ್ಯದ ಎಲ್ಲ ಕರ‍್ಯಾಚರಣೆ, ಹೋರಾಟಗಳಲ್ಲಿ ವಿಜಯ ದೊರೆಯಲಿ ಎಂದು ಪ್ರರ‍್ಥಿಸಲಾಗುತ್ತಿದೆ. ಯೋಧರು ಮತ್ತು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಎಲ್ಲ ನರ‍್ಧಾರ, ಹೋರಾಟಕ್ಕೆ ಸದಾ ಗೆಲುವು ದೊರೆಯಲಿ.
> ಚಂದು ಪಾಟೀಲ್
ಕಲಬುರಗಿ ನಗರಾಧ್ಯಕ್ಷ,ಬಿಜೆಪಿ