ಹೊಸಕೋಟೆ: ಳುವವನಿಗೆ ಭೂಮಿ, ಬಗರ್ ಹುಕುಂ, ಕ್ಷೀರಧಾರೆ, ಇ-ಸ್ವತ್ತು, ಹಕ್ಕುಪತ್ರ, ಮಹಾತ್ಮ ಗಾಂಧಿ ನರೇಗಾ ಯೋಜನೆ, ಆಹಾರ ಭದ್ರತೆ ಸೇರಿ ಹಲವು ಮಹತ್ವ ಯೋಜನೆ ಜಾರಿ ಮಾಡುವ ಮೂಲಕ ಬಡತನ ನಿರ್ಮೂಲನೆ ಮಾಡುವುದು ಕಾಂಗ್ರೆಸ್ ಸರ್ಕಾರವಾದರೆ, ಬಿಜೆಪಿ ಕೋಮು ಭಾವನೆಗಳ ಮೇಲೆ ರಾಜಕೀಯ ಮಾಡುವ ಪಕ್ಷವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಭಾನುವಾರ ತಾಲೂಕಿನ 10,508 ಜನರಿಗೆ ಇ-ಸ್ವತ್ತು, ಹಕ್ಕುಪತ್ರ ಹಾಗೂ ವಿವಿಧ ಸೌಲಭ್ಯಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದಲ್ಲಿ 140 ಶಾಸಕರನ್ನೊಳಗೊಂಡ ಸುಭದ್ರ ಸರ್ಕಾರವಿದೆ. ಪ್ರತಿ ವರ್ಷ 52 ಸಾವಿರ ಕೋಟಿ ರೂಪಾಯಿ ಮೊತ್ತದ ಗ್ಯಾರಂಟಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕವಾಗಿ 317ಜೆ ಅಡಿಯಲ್ಲಿ 5 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಅದರಲ್ಲಿ 1 ಸಾವಿರ ಕೋಟಿ ರೂಪಾಯಿ ಮೊತ್ತದ ಕೆಲಸಗಳು ಉದ್ಘಾಟನೆಗೊಂಡಿವೆ. ಕಾಂಗ್ರೆಸ್ ಮಾಡಿದ ೋಷಣೆಗಳನ್ನು ಕೇಂದ್ರ ಸರ್ಕಾರವು ಕಾಪಿ ಮಾಡಿ ಬಿಹಾರ ಚುನಾವಣೆಯಲ್ಲಿ ಬಳಸಿಕೊಂಡಿದೆ ಎಂದರು.
ಸಚಿವ ಪ್ರಿಯಂಕಾ ಖರ್ಗೆ ಮಾತನಾಡಿ, ಶಾಸಕ ಶರತ್ ಬಚ್ಚೇಗೌಡ ಇಡೀ ರಾಜ್ಯಕ್ಕೆ ಮಾದರಿಯಾಗುವ ಕಾರ್ಯಕ್ರಮ ಮಾಡಿದ್ದಾರೆ. ಇದೇ ಮಾಡಲ್ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದರು.
ಪ್ರತಿ ಪಕ್ಷದವರು ಕಾಂಗ್ರೆಸ್‌ನ ಭಾಗ್ಯಗಳನ್ನು ಬಿಟ್ಟಿ ಭಾಗ್ಯ ಎಂದು ಹೇಳಿ ಜನರ ದಾರಿತಪ್ಪಿಸುತ್ತಿದ್ದಾರೆ. ಆದರೂ ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಅಭಿವೃದ್ಧಿಯಲ್ಲಿ ದೇಶಕ್ಕೆ ಮೊದಲ ಸ್ಥಾನ ನೀಡಿದೆ ಎಂದು ಇದೇ ಕೇಂದ್ರ ಸರ್ಕಾರದವು ಪ್ರಶಂಸಾ ಪತ್ರವನ್ನು ರಾಜ್ಯಸರ್ಕಾರಕ್ಕೆ ನೀಡಿದೆ ಎಂದು ಹೇಳಿದರು. ಕೇಂದ್ರದ ಅಮಿತ್ ಷಾ ಹಾಗೂ ವರಿಷ್ಠರನ್ನು ಭೇಟಿ ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕರು ಅಸ್ತಿತ್ವ ಉಳಿಸಿಕೊಳ್ಳಲು ಇಲ್ಲ ಸಲ್ಲದ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಮೇಲೆ ಐಟಿ, ಇಡಿ ದಾಳಿ ಮಾಡಿಸುತ್ತಿದ್ದಾರೆ ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಚ್ಚೇಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವ್ ಮೂರ್ತಿ, ನಿರ್ದೇಶಕ ಡಾ.ಎಚ್‌ಎಂ.ಸುಬ್ಬರಾಜ್, ಜಿಲ್ಲಾಧಿಕಾರಿ ಬಸವರಾಜ್, ಜಿಪಂ ಸಿಇಒ ಡಾ.ಅನುರಾಧ, ತಾಪಂ ಇಒ ಡಾಸಿ ಎನ್.ನಾರಾಯಣಸ್ವಾಮಿ ಇತರರು ಇದ್ದರು.
ಮೆಟ್ರೋ, ಕಾವೇರಿ ಕೊಡಿ
ತಾಲೂಕಿಗೆ ಮೆಟ್ರೋ ಹಾಗೂ ಇಲ್ಲಿನ ಜನರಿಗೆ ಕಾವೇರಿ ನೀರು ಕುಡಿಯುವ ಆಸೆ ಇದ್ದು, ಕಾವೇರಿ 5ನೇ ಹಂತದ ನೀರು ಹರಿಸುವಂತೆ ವಿದ್ಯುನ್ಮಾನ ನಿಗಮದ ಅಧ್ಯಕ್ಷರೂ ಆದ ಶಾಸಕ ಶರತ್ ಬಚ್ಚೇಗೌಡ ಅವರು ಡಿಸಿಎಂಗೆ ಮನವಿ ಮಾಡಿದರು. ಮಾದರಿ ತಾಪಂ ಕಟ್ಟಡಕ್ಕಾಗಿ ಹೊಸಕೋಟೆಗೆ ಮೊದಲ ಅನುದಾನ ನೀಡಬೇಕು ಎಂದು ಸಚಿವ ಪ್ರಿಯಾಂಕಾ ಖರ್ಗೆ ಅವರಿಗೆ ಮನವಿ ಮಾಡಿದರು. ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ನಮ್ಮ ಬೆನ್ನೆಲುಬಾಗಿದ್ದು, ತಾಲೂಕಿನ 6,700 ಫಲಾನುಭವಿಗಳಿಗೆ ಇ-ಸ್ವತ್ತು, 1,035 ಜನರಿಗೆ ಹಕ್ಕು ಪತ್ರ, 81 ನೀರಗಂಟಿಗಳಿಗೆ ಕಾಯಂ ಉದ್ಯೋಗ ನೇಮಕಾತಿ ಪತ್ರ, 770 ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಅನುದಾನ, 858 ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸೌಕರ್ಯ ವಿತರಣೆ ಹಾಗೂ 430 ಸಂಜೀವಿನಿ, ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಫಲಾನುಭವಿಗಳಿಗೆ ಅನುದಾನ ವಿತರಣೆ ಮಾಡುತ್ತಿದ್ದೇವೆ ಎಂದರು.
ಹೊಸಕೋಟೆಗೆ ಮಾದರಿ ತಾಪಂ ಕಟ್ಟಡ
ಕಳೆದ ತಿಂಗಳು ಅಮೆರಿಕಕ್ಕೆ ತೆರಳಿದ್ದ ಶರತ್ ಬಚ್ಚೇಗೌಡ 7,700 ಕೋಟಿ ರೂಪಾಯಿ ವಿದೇಶಿ ಬಂಡವಾಳ ತಂದಿದ್ದಾರೆ. ಇದರಿಂದ 5 ರಿಂದ 6 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಶಾಸಕ ಶರತ್ ಬಚ್ಚೇಗೌಡರ ಮನವಿಯಂತೆ ಮೊದಲ ಮಾದರಿ ತಾಪಂ ಕಟ್ಟಡದ ಅನುದಾನವನ್ನು ಹೊಸಕೋಟೆಗೆ ನೀಡುತ್ತೇನೆ ಎಂದು ಸಚಿವ ಪ್ರಿಯಾಂಕಾ ಖರ್ಗೆ ೋಷಿಸಿದರು.
ಹಾಲು, ಸೊಪ್ಪು, ಹೂವುಮಾರುವವರಿಗೂ ತೆರಿಗೆ
ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ, ಮಹಾರಾಷ್ಟ್ರಗಳಲ್ಲಿ ರಾಜ್ಯ ಕಾಂಗ್ರೆಸ್ ನೀಡಿದ ಗ್ಯಾರಂಟಿ ಭಾಗ್ಯಗಳ ಮಾದರಿಯನ್ನೇ ಬಿಜೆಪಿ ಅನುಸರಿಸುತ್ತಿದೆ. ಅಂದರೆ ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ ಎಂದರ್ಥ. ಅಭಿವೃದ್ಧಿಯಲ್ಲಿ ಮುಂದಿದೆ ಎಂಬುದು ಜನರಿಗೆ ಗೊತ್ತಾಗಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ತೆರಿಗೆ ತಂದು ಹಾಲು, ಸೊಪ್ಪು, ಹೂವು ಮಾರುವವರಿಗೂ ತೆರಿಗೆ ವಿಧಿಸುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ಉತ್ತರ ಜಿಲ್ಲೆಗೆ ಮೆಟ್ರೋ, ಒಳಚರಂಡಿ ಹಾಗೂ ಎತ್ತಿನಹೊಳೆ ನೀರು ಹರಿಸುವ ಕಾಮಗಾರಿ ಶೀಘ್ರ ಮುಗಿಸಲು ಸಿಎಂ ಹಾಗೂ ಡಿಸಿಎಂ ಜತೆ ಇನ್ನೊಮ್ಮೆ ಚರ್ಚಿಸುತ್ತೇನೆ. -ಕೆ.ಎಚ್.ಮುನಿಯಪ್ಪ ಸಚಿವ