ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್  
ಜಿಲ್ಲೆ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಜೆಪಿ ಪಂಥಾಹ್ವಾನ

ನವೀನ ಬಿ.ಎಂ

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕುರಿತು ಯೋಗ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರ ಕಾರ್ಯಚಟುಚಟಿಕೆ ಬಗ್ಗೆ ಸಚಿವರು ಬಹಿರಂಗ ಚರ್ಚೆಗೆ ಬರಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಪಂಥಾಹ್ವಾನ ನೀಡಿದರು.

ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಾಗವನ್ನು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ರೈತರಿಗೆ ಕೊಡಿಸಬಹುದಿತ್ತೆಂದು ಕೀಳು ಅಭಿರುಚಿಯ ಪ್ರಶ್ನೆ ಎತ್ತಿದ್ದಾರೆ. ಅದೇ ವೇಳೆ ಬಿ.ವೈ.ರಾಘವೇಂದರ ಅವರ ಕಾರ್ಯಚಟುವಟಿಕೆಗಳನ್ನು ಪ್ರಶ್ನಿಸಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರ ತಂದೆಯೂ ಸಿಎಂ ಆಗಿದ್ದರು, ಸಂಸದರಾಗಿದ್ದರು ಎಂಬುದನ್ನು ಮರೆತಂತೆ ಕಾಣುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಸದ ರಾಘವೇಂದ್ರ ಅವರು ಕ್ಷೇತ್ರದಲ್ಲಿ ಎಷ್ಟೆಲ್ಲ ಕೆಲಸ ಮಾಡಿದ್ದಾರೆ. ಅವರ ಕೊಡುಗೆ ಏನಿದೆ ಎಂಬುದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ. ಚರ್ಚೆಗೆ ಬರಲು ಅವರು ಸಿದ್ಧರಾಗಬೇಕು ಎಂದರು. ಸೊರಬ ತಾಲೂಕಿನಲ್ಲಿ ಮೂಡಿ, ಮೂಗೂರು ಏತ ನೀರಾವರಿ ಯೊಜನೆ ಬರಲು ಯಡಿಯೂರಪ್ಪ, ರಾಘವೇಂದ್ರ ಅವರೇ ಬರಬೇಕಾಯಿತು ಎಂದರು.