ಹಗರಿಬೊಮ್ಮನಹಳ್ಳಿ: ರಾಜ್ಯವ್ಯಾಪಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಜನೌಷಧ ಕೇಂದ್ರಗಳ ತೆರವು ಖಂಡಿಸಿ ಬಿಜೆಪಿ ಪದಾಧಿಕಾರಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.
ದೇಶದ ಪ್ರತಿ ಬಡವನೂ ಉತ್ತಮ ಆರೋಗ್ಯ ಪಡೆಯಬೇಕೆನ್ನುವ ಉದ್ದೇಶದೊಂದಿಗೆ ಅತ್ಯಂತ ಖಡಿಮೆ ಬೆಲೆಗೆ ಜನ ಔಷಧ ಕೇಂದ್ರದಲ್ಲಿ ಔಷಧಗಳು ದೊರೆಯುತ್ತಿವೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಗುರಿಯಾಗಿಸಿಕೊಂಡು ಅವುಗಳ ತೆರವು ಕಾರ್ಯಮಾಡಿದ್ದು, ಜನಸಾಮಾನ್ಯರ ವಿರೋಧಿ ನಡೆಯಾಗಿದೆ ಎಂದು ಬಿಜೆಪಿ ಪದಾಧಿಕಾರಿಗಳು ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.