ತುಮಕೂರು: ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಲ್ಲಿ ಕಮೀಷನ್ ಸಿಕ್ಕಿಲ್ಲ ಎಂದು ಮಹಾನುಭಾವರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡಬಹುದು. ಇನ್ನೂ ಪೊಲೀಸ್ ಪೇದೆ ಆಗಿದ್ದ ಅವರ ತಂದೆ ಚನ್ನಿಗಪ್ಪ ರಾಜಕೀಯಕ್ಕೆ ಬಂದಿದ್ದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅನೇಕ ಕಥೆಗಳನ್ನು ಕೇಳಿದ್ದೇವೆ. ಹೆದ್ದಾರಿಯಲ್ಲಿ ಮರಳಿನ ಲಾರಿಗಳಿಂದ ಹಫ್ತಾ ವಸೂಲು ಮಾಡುತ್ತಿದ್ದರು ಎಂಬುದನ್ನು ಕೇಳಿದ್ದೇವೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಹರಿಹಾಯ್ದರು.
ಇದೆಲ್ಲಾ ಗೌರಿಶಂಕರ್ಗೆ ಮರೆತುಹೋಗಿದೆ. ಅವರು ಗಾಜಿನ ಮನೆಯಲ್ಲಿ ಇದ್ದುಕೊಂಡು ಬೇರೆಯವರತ್ತ ಕಲ್ಲು ಎಸೆಯೋದಲ್ಲ. ಯಾರಾದರು ಕ್ರಷರ್ನವರು ನನಗೆ ಲಂಚ ಕೊಟ್ಟಿದ್ದಾಗಿ ಹೇಳಿದರೆ ಕ್ರಷರ್ ಮುಂದೆ ನೇಣು ಹಾಕಿಕೊಳ್ಳುವೆ. ಇದು ಕೊನೆ ಎಚ್ಚರಿಕೆ. ಗೌರಿಶಂಕರ್ ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದರು.
ನನ್ನ ವಿರುದ್ಧ ಗೌರಿಶಂಕರ್ ವೈಯಕ್ತಿಕ ಆರೋಪ ಮಾಡಿದ್ದು ಅವರಂತೆ ಅದೇ ಭಾಷೆಯಲ್ಲಿ ಮಾತನಾಡಬಹುದು. ನನಗು ಅವರಿಗು ಯಾವ ವ್ಯತ್ಯಾಸವಿರುವುದಿಲ್ಲ. ರಾಜಕೀಯದಲ್ಲಿ ಇರುವ ನಾವು ಸಮಾಜಕ್ಕೆ ಮಾದರಿಯಾಗಬೇಕೇ ಹೊರತು ರೌಡಿಗಳಂತೆ ವರ್ತಿಸಬಾರದು, ಮಾತನಾಡಬಾರದು. ಬಿ.ಸುರೇಶಗೌಡ ಬಿಜೆಪಿ ಶಾಸಕ