ಜಿಲ್ಲೆ

ಜ್ಯೋತಿಗಣೇಶ್​ ಡಿಎನ್​ಎ ಕಾಂಗ್ರೆಸ್​ನದ್ದು!

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ನಗರ ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಡಿಎನ್​ಎ ಕಾಂಗ್ರೆಸ್​ನದ್ದು ಎಂದು ಸಚಿವ ಜಿ.ಪರಮೇಶ್ವರ ಹೇಳಿದ್ದು ಸಾಕಷ್ಟು ಇರಿಸುಮುರಿಸಿಗೆ ಕಾರಣವಾಯಿತು.

ಜ್ಯೋತಿಗಣೇಶ್​ ಮನಸ್ಸೆಲ್ಲೋ ಇದೆ. ಅವರಿಗೊಂತರಾ ಇಕ್ಕಟ್ಟು ನನಗೂ ಗೊತ್ತಿದೆ. ಅವರ ಡಿಎನ್​ಎನೇ ಕಾಂಗ್ರೆಸ್​ನದ್ದು. ಇಲ್ಲ ಅನ್ನಲಿ ನೋಡೋಣ ಎಂದು ತುಮಕೂರು ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಹಾಸ್ಯಮಿಶ್ರಿತ ದಾಟಿಯಲ್ಲಿ ಹೇಳಿದರು.

ಸಚಿವರ ಈ ಹೇಳಿಕೆಯಿಂದ ತೀವ್ರ ಮುಜಗರಕ್ಕೊಳಗಾದ ಜ್ಯೋತಿಗಣೇಶ್​, ಸರ್​ ನಾನು ರಾಜಕೀಯಕ್ಕೆ ಬರಬೇಕು ಅಂದುಕೊಂಡಿರಲಿಲ್ಲ. ನಮ್ಮ ತಂದೆ ಸೇರಿ ಯಾರ್ಯಾರು ಯಾವ ಪಕ್ಷದಲ್ಲಿದ್ದರು? ಈಗ ಎಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಅವರ ಕಾರಣಕ್ಕೆ ನಾನು ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದೆ ಎಂದು ಸ್ಪಷ್ಟಪಡಿಸಿದರು.

ತುಮಕೂರಿಗೆ ಷಡಕ್ಷರಿಗೆ ಆಹ್ವಾನ: ತಿಪಟೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದು ಮುಂದಿನ ದಿನಗಳಲ್ಲಿ ಮಹಿಳಾ ಮೀಸಲು ಕ್ಷೇತ್ರವಾಗುವ ಸಾಧ್ಯತೆ ಇದೆ. ಹಾಗಾಗಿ, ಷಡಕ್ಷರಿ ತುಮಕೂರಿಗೆ ಬಂದು ಸ್ಪರ್ಧಿಸಲಿ ಎಂದು ಪರಮೇಶ್ವರ್​ ಹಾಸ್ಯ ಚಟಾಕಿಹಾರಿಸಿದರು.