ಜಿಲ್ಲೆ

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ದಕ್ಷಿಣ ಕನ್ನಡದಲ್ಲಿ ಅತ್ಯುತ್ತಮ ಸ್ಪಂದನೆ; ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಹರ್ಷ

Mangaluru - Prakash MC Manjeshwar

ವಿಜಯವಾಣಿ ಸುದ್ದಿಜಾಲ ಮಂಗಳೂರು
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ಪಕ್ಷದ ಸಂವಿಧಾನ ಪ್ರಕಾರ ಆರು ವರ್ಷಗಳಿಗೊಮ್ಮೆ ಸದಸ್ಯತ್ವ ನವೀಕರಣ ಪದ್ಧತಿ ಬಿಜೆಪಿಯಲ್ಲಿ ಮಾತ್ರವಿದೆ ಎಂದು ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಧೀರಜ್ ಮುನಿರಾಜು ಹೇಳಿದರು.
ಮಂಗಳೂರು ಕುಲಶೇಖರ ಬೇಕರಿ ಪರಿಸರದಲ್ಲಿ ಶುಕ್ರವಾರ ಸಂಜೆ ಜರುಗಿದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕರ್ನಾಟಕ ಕರಾವಳಿಯಲ್ಲಿ ಸಹಜವಾಗಿಯೇ ಜನರಲ್ಲಿ ಬಿಜೆಪಿ ಕಡೆ ಹೆಚ್ಚಿನ ಒಲವಿದೆ. ದೇಶ ಕಟ್ಟುವಲ್ಲಿ ಯುವಮೋರ್ಚಾ ಸಂಘಟನೆಯು ಯಾವತ್ತೂ ಬಿಜೆಪಿ ಜತೆ ನಿಲ್ಲುವುದು ಎಂದು ಅವರು ಹೇಳಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಪಾಲಿಕೆ ಸದಸ್ಯ ಕಿಶೋರ್ ಕೊಟ್ಟಾರಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ವಿಖ್ಯಾತ್ ಶೆಟ್ಟಿ, ಎಚ್.ಎಂ.ಪ್ರಣಯ್, ದಕ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ, ಮುಖಂಡರಾದ ಭರತ್‌ರಾಜ್ ಕೃಷ್ಣಾಪುರ, ಅಕ್ಷಿತ್ ಕೊಟ್ಟಾರಿ, ರಕ್ಷಿತ್ ಪೂಜಾರಿ, ಮುರಳೀಧರ ಕೊಣಾಜೆ, ಕುಮಾರ್ ಪ್ರಸಾದ್, ರಮೇಶ್ ಕಂಡೆಟ್ಟು, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್ ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ಪೂಜೆ ಸಲ್ಲಿಸಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಿದ ಅವರು, ಕಟೀಲು, ಪೊಳಲಿ, ಪುತ್ತೂರು ಮುಂತಾದೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಕ್ಟೋಬರ್ 5 ರಂದು ಅವರು ಉಡುಪಿಯಲ್ಲಿ ಪ್ರವಾಸ ಮುಂದುವರಿಸಲಿದ್ದಾರೆ ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ.