ವಿಜಯಪುರ: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸದಸ್ಯತ್ವ ಅಭಿಯಾನ ನಡೆಯಿತು.
ನಗರ ಮಂಡಲ ಅಧ್ಯಕ್ಷ ಶಂಕರ ಶ್ರೀಕಾಂತ ಮಾತನಾಡಿ, ಜಗತ್ತಿನ ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಪಕ್ಷ ಬಿಜೆಪಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇನ್ನಷ್ಟು ಸದಸ್ಯತ್ವ ಪ್ರಮಾಣ ಹೆಚ್ಚಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸರ್ವರೂ ಮನೆ ಮನೆಗೆ ಭೇಟಿ ನೀಡಿ ಸದಸ್ಯತ್ವ ಹೆಚ್ಚಿಸೋಣ ಎಂದರು.
ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಮಳುಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ (ಡೊಮನಾಳ), ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಮಹೇಶ ಒಡೆಯರ, ಲಕ್ಷ್ಮಿ ಕನ್ನೋಳ್ಳಿ, ರಾಜು ಕುರಿಯವರ, ವಿನೋದ ಪತ್ತಾರ, ಪ್ರಕಾಶ ಚವಾಣ, ರಾಚು ಬಿರಾದಾರ, ರೋಹನ ಆಪ್ಟೆ, ರಾಹುಲ ಔರಂಗಾಬಾದ್, ಜವಾಹಾರ ಹೊಸಾವಿ, ಆನಂದ ಪಡಗಾನೂರ, ವಿನೋದ ತೆಲಸಂಗ, ಶಂಕರ ಥಾಲಬಾವಡಿ, ಅಮಿತ ಗರುಡಕರ, ಬಸವರಾಜ ಬೈಚಬಾಳ ಮತ್ತಿತರರಿದ್ದರು.
ಪ್ರವೀಣ ಕೂಡಗಿ ನಿರೂಪಿಸಿದರು. ದೇವೇಂದ್ರ ಹಡಲಗಿ ಪ್ರಾರ್ಥಿಸಿದರು.