ಜಿಲ್ಲೆ

ಉಗ್ನಿಕೇರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಬಸವರಾಜ ವೀರಪ್ಪ ಗರಗ

ಕಲಘಟಗಿ: ಬಿಜೆಪಿ ಸದಸ್ಯತ್ವ ಅಭಿಯಾನ ಅಂಗವಾಗಿ ತಾಲೂಕಿನ ಉಗ್ನಿಕೇರಿ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗ್ರಾಮದ ವಿವಿಧೆಡೆ ಸಂಚರಿಸಿ ಅನೇಕರಿಂದ ಸದಸ್ಯತ್ವ ಮಾಡಿಸಿದರು.

ಉಗ್ನಿಕೇರಿ ಗ್ರಾಮದ ಬಸ್ ನಿಲ್ದಾಣ, ಹರಿಜನ ಕೇರಿ, ಕುರುವಿನಕೊಪ್ಪ ರಸ್ತೆ ಮಾರ್ಗಗಳಲ್ಲಿ ಸಂಚರಿಸಿದ ಸಚಿವರು, ಜನರ ಕುಶಲೋಪರಿ ವಿಚಾರಿಸಿದರು. ಸ್ವಂತಃ ತಾವೇ ಬಿಜೆಪಿ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿ ಸದಸ್ಯತ್ವ ನೋಂದಣಿ ಮಾಡಿಸಿದರು.

‘ಭಾರತೀಯ ಜನತಾ ಪಕ್ಷವು ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ಎಲ್ಲೆಡೆ ಬಿಜೆಪಿ ಸೇರಲು ಜನರು ಉತ್ಸುಕರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಜನರ ಬಳಿ ಹೋಗಿ ಹೆಚ್ಚು ನೋಂದಣಿಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಅಣ್ಣಪ್ಪ ಓಲೇಕಾರ, ಫಕೀರೇಶ ನೇಸರೇಕರ, ಪುಂಡಲೀಕ ಜಾಧವ, ಆನಂದ ಕಡ್ಲಾಸ್ಕರ, ರವಿ ಅಲ್ಲಾಪುರ, ಇತರರಿದ್ದರು.