ಜಿಲ್ಲೆ

ಬಿಜೆಪಿ ಸದಸ್ಯತಾ ಅಭಿಯಾನದ ಪ್ರಗತಿ ಪರಿಶೀಲನೆ

Mangaluru - Hariprasad Rai


ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಯಿತು.
ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾತನಾಡಿ ‘ ಬಿಜೆಪಿ ಸದಸ್ಯತಾ
ಅಭಿಯಾನದಲ್ಲಿ ದಕ್ಷಿಣ ಬಿಜೆಪಿ ಕಾರ್ಯಕರ್ತರು ಎಲ್ಲ ಮಂಡಲಗಳಲ್ಲಿ ಸಂಘಟಿತರಾಗಿ ಪಾಲ್ಗೊಂಡಿದ್ದಾರೆ.ಹೆಚ್ಚು ಸದಸ್ಯರನ್ನಾಗಿ ಸೇರಿಸುವುದಕ್ಕಾಗಿ ಇರುವ ಉತ್ಸಾಹ ಶ್ಲಾಘನೀಯ ಎಂದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕಿ ಭಾಗೀರಥಿ ಮರುಳ್ಯ, ಮೇಯರ್ ಮನೋಜ್ ಕುಮಾರ್ ಕೋಡಿಕಲ್ , ಉಪ ಮೇಯರ್ ಭಾನುಮತಿ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ, ಕಿಶೋರ್ ಕುಮಾರ್ ಬೊಟ್ಯಾಡಿ ಉಪಸ್ಥಿತರಿದ್ದರು.