ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಸ್ಮರಣಾರ್ಥ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಸಂಜೆ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನೇಹಾ ಬೇಟಿ ಅಮರ ರಹೇ....ಕಾನೂನು-ಸುವ್ಯವಸ್ಥೆ ಪುಂಡರ ಕೈಗೆ ಕೊಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಘೊಷಣೆ ಕೂಗಿದರು.
ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಮಾತನಾಡಿ, ನೇಹಾಳ ಹತ್ಯೆಗೆ ಹಂತಕ ಫಯಾಜ್ಗೆ 2 ವರ್ಷಗಳಿಂದ ತರಬೇತಿ ಆಗಿದೆ. ಇದೊಂದು ವ್ಯವಸ್ಥಿತ ಕೃತ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ 160ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಬೇಷರತ್ ಬಿಡುಗಡೆ ಮಾಡಿತು. ವೋಟ್ ಬ್ಯಾಂಕ್ಗಾಗಿ ಅಲ್ಪಸಂಖ್ಯಾತರ ಮುಂದೆ ಕಾಂಗ್ರೆಸ್ ಮಂಡಿಯೂರಿದೆ ಎಂದು ಆರೋಪಿಸಿದರು.
ರಾಜಶ್ರೀ ಸಾಲಗಟ್ಟಿ, ಅನುರಾಧಾ ಚಿಲ್ಲಾಳ, ಪ್ರತಿಭಾ ಪವಾರ, ಭಾರತಿ ಅಳವಂಡಿ, ಪಾಲಿಕೆ ಸದಸ್ಯೆಯರಾದ ಸೀಮಾ ಲದವಾ, ಚಂದ್ರಿಕಾ ಮೇಸ್ತ್ರಿ, ಜ್ಯೋತಿ ಪಾಟೀಲ, ಮೀನಾಕ್ಷಿ ವಂಟಮುರಿ, ರೂಪಾ ಶೆಟ್ಟಿ, ಮೇನಕಾ ಹುರುಳಿ, ರಾಧಾಬಾಯಿ ಸಫಾರೆ, ಇತರರು ಇದ್ದರು.