ಜಿಲ್ಲೆ

ನೈಋತ್ಯ ಪದವಿಧರರ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ

ಸದೇಶ್ ಕಾರ್ಮಾಡ್

ಮೈಸೂರು: ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನೈಋತ್ಯ ಪದವಿಧರರ ಕ್ಷೇತ್ರದ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, 2 ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಡಾ. ಧನಂಜಯ ಸರ್ಜಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಯನೂರ್ ಮಂಜುನಾಥ್ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ. ರಘುಪತಿ ಭಟ್ ನಂತರದ ಸ್ಥಾನದಲ್ಲಿ ಇದ್ದಾರೆ.

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಡಾ. ಧನಂಜಯ ಸರ್ಜಿ 6714, ರಘುಪತಿ ಭಟ್ 3,128, ಆಯನೂರು ಮಂಜುನಾಥ್ 2,434 ಮತಗಳನ್ನು ಪಡೆದಿದ್ದು, 2ನೇ ಸುತ್ತಿನಲ್ಲಿ ಡಾ. ಧನಂಜಯ ಸರ್ಜಿ 7363, ಆಯನೂರ್ ಮಂಜುನಾಥ್ 2,816, ರಘುಪತಿ ಭಟ್ 1963 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆಯನೂರ್ ಮಂಜುನಾಥ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರಿಗೆ ಇದೀಗ ಆರಂಭಿಕ ಹಿನ್ನಡೆ ಉಂಟಾಗಿದೆ. ಮತ ಎಣಿಕೆ ಶುಕ್ರವಾರವೂ ಮುಂದುವರೆಯುವ ಸಾಧ್ಯತೆ ಇದ್ದು, ಫಲಿತಾಂಶ ಎಲ್ಲರಲ್ಲೂ ಕುತುಹಲ ಮೂಡಿಸಿದೆ.