ಕುಷ್ಟಗಿ ಪುರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಗಂಗಾಧರ ಸ್ವಾಮಿ ಹಿರೇಮಠ ಆಯ್ಕೆಯಾಗಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಿಸಿದರು. 
ಜಿಲ್ಲೆ

ಫಲಿಸಿದ ಬಿಜೆಪಿ ಕಾರ್ಯತಂತ್ರ, ಕುಷ್ಟಗಿ ಪುರಸಭೆ ಅಧ್ಯಕ್ಷರಾಗಿ ಜಿ.ಕೆ.ಹಿರೇಮಠ ಆಯ್ಕೆ

Koppal

ಕುಷ್ಟಗಿ: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಕಾರ್ಯತಂತ್ರ ಫಲಿಸಿ ಹೆಚ್ಚು ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗವಾಗಿದೆ.

ಗಂಗಾಧರ ಸ್ವಾಮಿ ಹಿರೇಮಠ

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಂಗಾಧರ ಸ್ವಾಮಿ(ಜಿ.ಕೆ) ಹಿರೇಮಠ ಅಧ್ಯಕ್ಷರಾಗಿ ಆಯ್ಕೆಯಾದರೆ, 16ನೇ ವಾರ್ಡ್‌ನ ರಾಜೇಶ್ವರಿ ಆಡೂರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಪುರಸಭೆ ಆಡಳಿತ ಬಿಜೆಪಿ ವಶವಾಗಿದೆ. 23 ಸದಸ್ಯ ಬಲ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ 12, ಬಿಜೆಪಿಯ 8 ಹಾಗೂ ಪಕ್ಷೇತರ ಮೂವರು ಆಯ್ಕೆಯಾಗಿದ್ದರು. ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಕಾರ್ಯತಂತ್ರ ನಡೆಸಿದ ಬಿಜೆಪಿ, ಪಕ್ಷೇತರ ಮೂವರು ಹಾಗೂ ಕಾಂಗ್ರೆಸ್‌ನ ಇಬ್ಬರಿಗೆ ಗಾಳ ಹಾಕಿ ಸದಸ್ಯ ಬಲ ಹೆಚ್ಚಿಸಿಕೊಂಡಿತು. ಸ್ಪಷ್ಟೀಕರಣ ಕೇಳಿ ನೋಟಿಸ್ ಹಾಗೂ ವಿಪ್ ಜಾರಿ ಮಾಡಿದಾಗ್ಯೂ ಕಾಂಗ್ರೆಸ್ ಸದಸ್ಯರಾದ ವೀರೇಶ ಬೆದವಟ್ಟಿ ಹಾಗೂ ಗೀತಾ ತುರಕಾಣಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.