ಜಿಲ್ಲೆ

ಹೊಟ್ಟೆಪಾಡಿನ ವಿಷಯ ಮುಚ್ಚಿಹಾಕಲು ಬಿಜೆಪಿ ಯತ್ನ

ಚಿತ್ರದುರ್ಗ: ಹೊಟ್ಟೆಪಾಡಿನ ವಿಷಯ ಮುಚ್ಚಿ ಹಾಕಲು, ಭಾವನಾತ್ಮಕ ವಿಷಯಗಳ ಮೂಲಕ ಚುನಾವಣೆ ನಡೆಸುವುದೇ ಬಿಜೆಪಿ ತನ್ನ ಅಸ್ತ್ರ ಮಾಡಿಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ಚಿತ್ರದುರ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿಯವರೆಗೂ ಬಿಜೆಪಿ ಈ ರೀತಿಯೇ ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಚುನಾವಣೆ ನಡೆಸಿದೆ. ಈಗಾಗಲೇ ಜನರು ಬಿಜೆಪಿ ಆಟ ನೋಡಿದ್ದು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಹಸಿದವರಿಗೆ ಅನ್ನ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆ ಎಂದು ದಿ ಪ್ರೆಸಿಡೆಂಟ್ ಆಫ್ ಭಾರತ್ ವಿಚಾರಕ್ಕೆ ಪ್ರತಿಕ್ರಿಯಿಸಿದರು.