ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಮಾಹಿತಿ
ಬೆಳಗಾವಿ:ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮುಗಿದ ಬಳಿಕ ಜ.31ರಿಂದ ಮಾರ್ಚ್ 25ರವರೆಗೆ ರಾಜ್ಯದ ರಾಮ ಭಕ್ತರಿಗೆ ಅಯೋಧ್ಯೆಯ ರಾಮ ದರ್ಶನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ತಿಳಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಗೆ ತೆರಳಲು ರಾಜ್ಯದ ವಿವಿಧ 25 ಸ್ಥಳಗಳಿಂದ 25ನೇರ ವಿಶೇಷ ರೈಲು ನಿಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಸುಮಾರು 35ಸಾವಿರಕ್ಕೂ ಹೆಚ್ಚು ರಾಮಭಕ್ತರು ರಾಮ ದರ್ಶನ ಪಾಲ್ಗೊಳ್ಳಲಿದ್ದಾರೆ.ಒಟ್ಟು ಆರು ದಿನಗಳ ಈ ಪ್ರವಾಸದಲ್ಲಿ ಪ್ರತಿಯೊಬ್ಬರಿಗೂ 3ಸಾವಿರ ರೂ.ವೆಚ್ಚವಾಗಲಿದೆ. ಇದನ್ನು ರಾಮ ಭಕ್ತರೆ ಭರಿಸಬೇಕು ಎಂದರು.
ಅಯೋಧ್ಯೆಪ್ರವಾಸ ಪ್ರಾರಂಭದಿಂದ ಮರಳಿ ಬರುವ ವರೆಗೆ ಕನ್ನಡದಲ್ಲಿ ಮಾಹಿತಿ ಒದಗಿಸುವ ವ್ಯವಸ್ಥೆ ಮಾಡಲಾಗಿದ್ದು, ಪ್ರಬಂಧಕರನ್ನು ನಿಯೋಜಿಸಲಾಗುತ್ತಿದೆ. ರಾಮ ಭಕ್ತರಿಗೆ ರೈಲ್ವೆಯಲ್ಲಿ ಉಪಹಾರ ಊಟ ವ್ಯವಸ್ಥೆ ಮಾಡಲಾಗುತ್ತಿದೆ.ಅಯೋದ್ಯೆಯಲ್ಲಿ 48 ಕಡೆ ಪ್ರಸಾದ ನಡೆಯಲಿದ್ದು ಅದರಲ್ಲಿ 2 ಕಡೆ ಕರ್ನಾಟಕ ರಾಮ ಭಕ್ತರಿಗೆ ಮಿಸಲಿದೆ. ಕರ್ನಾಟಕದ ಭಕ್ತರ ವಸತಿಗಾಗಿ ಆಧುನಿಕ ಜರ್ಮನ ಟೆಂಟ್ ನಿರ್ಮಿಸಲಾಗಿದೆ. ದಿನ ಒಂದಕ್ಕೆ ಒಂದು ರೈಲಿನಲ್ಲಿ 1500ರಾಮಭಕ್ತರು ತೆರಳಲಿದ್ದು ಅವರಿಗೆ ವೈಕ್ತಿಕ ಮಾಹಿಯುಳ್ಳ ಕ್ಯೂ ಆರ್ ಕೊಡ ಪತ್ರ ನೀಡಲಾಗುವುದು ಎಂದು ಹೇಳಿದರು.
ರಾಮಮಂದಿರ ನಿರ್ಮಾಣದ ಕಾರ್ಯದ ಪ್ರಮುಖ ಸ್ಥಾನದಲ್ಲಿ ನಮ್ಮ ರಾಜ್ಯದವರೆ. ಅದರಲ್ಲಿ ಬೆಳಗಾವಿಯ ಗೋಪಾಲಜಿ ಅನ್ನುವದು ನಮ್ಮ ಜಿಲ್ಲೆಯ ಗೌರವ.ಬಾಲ ರಾಮನ ಮೂರ್ತಿಗೆ ಉಪಯೋಗಿಸಿರುವ ಶಿಲೆ ಕರ್ನಾಟಕದ ಹೆಗ್ಗಣ ದೇವನ ಕೋಟೆಯದು.ಬಾಲ ರಾಮನ ಮೂರ್ತಿ ತಯಾರಿಸಿದ ಶಿಲ್ಪಿ ನಮ್ಮ ರಾಜ್ಯದ ಮೈಸೂರಿನ ಅರುಣ ಯೋಗರಾಜ, ಮಂದಿರ ನಿರ್ಮಾಣದಲ್ಲಿ ಕರ್ನಾಟಕದ 6ಜನ ಶಿಲ್ಪಿಗಳು ಕಾರ್ಯ ಮಾಡಿದ್ದಾರೆ. ರಾಮಮಂದಿರದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ ಬೆನಕೆ ಮಾತನಾಡಿ, ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೃಹತ್ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರಾಮದುರ್ಗ ತಾಲೂಕಿನ ಶಬಿರ ಕೊಳ್ಳದಲ್ಲಿ ಸಾವಿರಕ್ಕೂ ಅಧಿಕ ಕಾರ್ಯಕರ್ತರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಸಂಸದೆ ಮಂಗಲ ಅಂಗಡಿ, ಮಹಾನಗರ ಅಧ್ಯಕ್ಷ ಗೀತಾ ಸುತಾರ, ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ ದೇಶಪಾಂಡೆ, ಮುರಘೇಂದ್ರ ಪಾಟೀಲ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್..ಸಿದ್ದನಗೌಡರ, ಶರದ ಪಾಟೀಲ, ಉಜ್ವಲಾ ಬಡವನಾಚೆ, ಸಂತೋಷ ದೇಶನೂರ ಇತರರಿದ್ದರು.