ಜಿಲ್ಲೆ

ಬೆಳಗಾವಿಯಲ್ಲಿ ‌ ಮೇವು ಹಗರಣ; ಮೇವು ತಿಂದವರು ಯಾರು?

ಮಂಜುನಾಥ ಕೋಳಿಗುಡ್ಡ


-ಶಾಸಕ ಅಭಯ ಪಾಟೀಲ ದೂರು
ಬೆಳಗಾವಿ: ರಾಜ್ಯದಲ್ಲಿ ತೀವ್ರ ಬರ ಸಂದರ್ಭದಲ್ಲಿ ಸರ್ಕಾರವು ಜಾನುವಾರುಗಳ ಮೇವು ಕೂಡ ಬಿಟ್ಟಿಲ್ಲ. ಬಿಹಾರ ಕ್ಕಿಂತ ದೊಡ್ಡಪ್ರಮಾಣದಲ್ಲಿ ಮೇವು ಹಗರಣ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಆರೋಪಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲಾತಿಗಳಲ್ಲಿಯೇ ಮೇವು ವಿತರಣೆ ಆಗಿದೆ ವಿನಃ ವಾಸ್ತವದಲ್ಲಿ ಮೇವು ವಿತರಣೆಆಗಿಲ್ಲ. ಇದದೊಂದು ದೊಡ್ಡ ಹಗರಣವಾಗಿದೆ.‌ಮೇವು ತಿಂದವರ ಯಾರು ಎಂಬುದು ಜನರಿಗೆ ಗೊತ್ತಾಗಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದ್ದು, ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗೀತಗೊಳಿಸಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿಗಳ ಅನುದಾನ ವಾಪಸ್ ಪಡೆದುಕೊಂಡಿದೆ. ಗುತ್ತಿಗೆದಾರರು ಬಾಕಿ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ನೌಕರರಿಗೂ ವೇತನ ಕೊಡುವುದನ್ನು ನಿಲ್ಲಿಸಲಿದೆ. ಡೀಸೆಲ್‌, ಪೆಟ್ರೋಲ್ ದರ ಏರಿಕೆಯಿಂದ ಎಲ್ಲ ಕ್ಷೇತ್ರದಲ್ಲಿ ದರ ಏರಿಕೆ ಕಂಡಿದೆ.‌ಸಾಮಾನ್ಯ ಜನರು ಬದುಕು ಕಷ್ಟವಾಗಿದೆ ಎಂದು ದೂರಿದರು.
ಮಾಜಿ ಶಾಸಕ ಅನೀಲ ಬೆನಕೆ.‌ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಇತರರಿದ್ದರು.