ಹೊಸಪೇಟೆ ಬಿಜೆಪಿ ಕಚೇರಿಯಲ್ಲಿ ಮಂಡಲ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಅಧ್ಯಕ್ಷ ಶಂಕರ್ ಮೇಟಿಗೆ ಪಕ್ಷದ ಬಾವುಟ ನೀಡಿ ಜವಾಬ್ದಾರಿ ವಹಿಸಿದರು.  
ಜಿಲ್ಲೆ

ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿ

ಹೊಸಪೇಟೆ : ಮುಂದಿನ ಎಂಪಿ ಚುನಾವಣೆಗೆ ಯಾರೇ ಪಕ್ಷದ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವ ಹೊಣೆ ನಮ್ಮದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಮಂಡಲ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು‌.

ಬಿಜೆಪಿ ಪಕ್ಷದ ಕಾರ್ಯಕರ್ತರು ಬಾರಿ ವಿಭಿನ್ನವಾಗಿರುತ್ತಾರೆ. ಬಿಜೆಪಿಯಲ್ಲಿ ಯಾವುದೇ ಘಟಕವಾಗಲಿ ರಾಜ್ಯವಾಗಲಿ ಅಥವಾ ಕೇಂದ್ರವಾಗಲಿ ಮುಂದೆನ ಅಧ್ಯಕ್ಷರು ಯಾರು ಎಂಬುದು ನಿಗದಿತವಾಗಿರಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತರು ಕೂಡ ಉನ್ನತ ಹುದ್ದೆ ಅಲಂಕಾರಿಸುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಈ ಸಂಸ್ಕೃತಿ ಇಲ್ಲ. ನೆಹರು ದಿಂದ ಹಿಡಿದು, ಮಗಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಸರದಿಯಲ್ಲಿ ಅಧಿಕಾರ ಅನುಭವಿಸುವ ಪಕ್ಷವಾಗಿದೆ. ನೆಹರು ಅವರ ಕುಟುಂಬ ಇಲ್ಲಿ ಅಂತಿಮ ನಿರ್ಣಯಕರು ಎಂದರು.

ಗ್ಯಾರಂಟಿ ಯೋಜನೆಯಲ್ಲಿ ಮುಳುಗಿರುವ ಸರ್ಕಾರ ಶಾಸಕರಿಗೆ ಅನುದಾನ ನೀಡಿಲ್ಲ. ಯಾಕನ ಈ ಬಾರಿ ಶಾಸಕನಾದೆ ಎಂದು ಕಾಂಗ್ರೆಸ್ ಶಾಸಕರು ಪಶ್ಚಾತ್ತಾಪ ಪಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಧನೆ ಹಾಗೂ ಕಾಂಗ್ರೆಸ್‌ ನ ದುರಾಡಳಿತದ ಬಗ್ಗೆ ಜನರಿಗೆ ಮನಮುಟ್ಟುವಂತೆ ಜಾಗೃತಿ‌ಮೂಡಿಸಬೇಕಿದೆ. ಆದ್ದರಿಂದ ಮಂಡಲದಲ್ಲಿ ನೂತನ ಪದಾಧಿಕಾರಿಯಾಗಿರುವ ನೀವುಗಳು, ಪಕ್ಷ ನಮಗೆ ಕೊಟ್ಟಿರುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದ್ದು ಮನೆ ಮನೆಗಳಲ್ಲಿ ಬಿಜೆಪಿ ಬೀರೂರಬೇಕಿದೆ. ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿ ಎಂದರು.

ಎಸ್ಟಿ ಮೋರ್ಚ ರಾಜ್ಯಾಧ್ಯಕ್ಷ ಬಂಗಾರು ಹನುಮಂತ, ಒಬಿಸಿ ಮೋರ್ಚ ರಾಜ್ಯ ಉಪಾಧ್ಯಕ್ಷ ಅಯ್ಯಳಿತಿಮ್ಮಪ್ಪ, ಜಿಲ್ಲಾ ಉಪಾಧ್ಯಕ್ಷ ಸಿದ್ದಾರ್ಥ ಸಿಂಗ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಡಿ ಕೊಟ್ರೇಶ್, ನಗರಸಭೆ ಅಧ್ಯಕ್ಷೆ ಲತಾ, ಪ್ರಮುಖರಾದ ಅಶೋಕ್ ಜೀರೆ, ಸಾಲಿಸಿದ್ದಯ್ಯಸ್ವಾಮಿ, ಜಂಬಯ್ಯನಾಯಕ, ಕಿಚಡಿ ಶ್ರೀನಿವಾಸ್, ರೇವಣ್ಣಸಿದ್ದಪ್ಪ, ಅರುಂಡಿ ಸುವರ್ಣಮ್ಮ, ಬಸವರಾಜ್ ನಾಲತ್ವಾಡ ಇತರರಿದ್ದರು.