ಮಾಜಿ ಸಚಿವ ಕಿಮ್ಮನೆ ರತ್ನಾಕರ್ 
ಜಿಲ್ಲೆ

ಕಾಂಗ್ರೆಸ್ ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ: ಕಿಮ್ಮನೆ ರತ್ನಾಕರ್ ಕಿಡಿ

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು.

ಮಹಾತ್ಮ ಗಾಂಧಿ ಪಾರ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಗ್ಯಾರಂಟಿಗೆ ಹೆದರಿದ ಬಿಜೆಪಿ ಹತಾಶೆಯಿಂದ ಜನರಲ್ಲಿ ಗೊಂದಲ ಮೂಡಿಸಲು ಹೊರಟಿದೆ. ಕಾಂಗ್ರೆಸ್ ಸರ್ಕಾರ ರಚನೆ ಆದ 24 ಗಂಟೆಯೊಳಗೆ ಗ್ಯಾರಂಟಿಗಳನ್ನು ಜಾರಿಗೊಳಿಸಿ ಎಂದು ಬಿಜೆಪಿ ಪಟ್ಟು ಹಿಡಿದು ಕೂತಿದೆ. ಅದಕ್ಕೆ ಪ್ರತಿರೋಧ ವ್ಯಕ್ತಪಡಿಸುವ ಅನಿವಾರ್ಯತೆ ಇದೆ ಎಂದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಿದವರು ಪಕ್ಷದಲ್ಲಿ ಇದ್ದಾರಾ? ಅಥವಾ ಪಕ್ಷ ತೊರೆದು ಹೋಗಿದ್ದಾರ ತಿಳಿಯುತ್ತಿಲ್ಲ. ಅವರ ಪ್ರಣಾಳಿಯಲ್ಲಿ 605 ಕಾರ್ಯಕ್ರಮಗಳನ್ನು ರಚಿಸಿದ್ದರು. ಅದರಲ್ಲಿ ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಎಲ್ಲ ರೈತರ ಸಾಲಮನ್ನಾ ಮಾಡುತ್ತೇವೆಂದು ಭರವಸೆ ನೀಡಿದ್ದರು. ಸಾಲಮನ್ನಾ ಮಾಡಿದ್ದೇವೆ ಎಂದು ಸಾಬೀತು ಮಾಡಲು ಸಾಧ್ಯ ಆಗುತ್ತದೆಯ ಎಂದು ಪ್ರಶ್ನಿಸಿದರು.
ಜಾತಿ-ಧರ್ಮದ ಮಧ್ಯ ಜಗಳ ಹಚ್ಚುತ್ತಾರೆ. ಅದರಲ್ಲಿ ಲಾಭ ಆಗಿಲ್ಲ ಎಂದರೆ ಹಣ ಕೊಟ್ಟು ಗೆಲ್ಲಲು ಮುಂದಾಗುತ್ತಾರೆ. ಅದು ಸಾಧ್ಯವಾಗಿಲ್ಲ ಎಂದಾದರೆ ಗೆದ್ದವರನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ. ಇದು ಬಿಜೆಪಿಯ ದೋಷಗಳು. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಇದನ್ನೇ ಅವರು ಮಾಡಿದ್ದಾರೆ. ಪ್ರಜಾಪ್ರಭುತ್ವವನ್ನೇ ಕೊಂಡುಕೊಳ್ಳಲು ಮುಂದಾಗುತ್ತಾರೆ. ಇದು ನರೇಂದ್ರ ಮೋದಿ ಅವರ ಸ್ಟ್ರಾಟರ್ಜಿ ಎಂದು ಆರೋಪಿಸಿದರು.

ಮೋದಿ ಬಡವರಿಗೆ ಪಕ್ಕಾ ಮನೆ ಕಟ್ಟಿಕೊಡಿಸುತ್ತೇವೆ ಎಂದಿದ್ದರು. ಅದು ಆಗಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ 1 ಡಾಲರ್‌ಗೆ 55 ರೂ. ಇತ್ತು. ಈಗ 84 ರೂ. ಆಗಿದೆ. ಈಗ ಮೋದಿ ಏನು ಹೇಳುತ್ತಾರೆ?. ಚುನಾವಣೆ ಬಂದಾಗ ಬಿಜೆಪಿ ಅವರಿಗೆ ಜಾತಿ ಧರ್ಮ ನೆನಪಾಗುತ್ತದೆ. ಹಿಂದು ಧರ್ಮದಲ್ಲಿರುವ ನ್ಯೂನತೆ ಸರಿ ಪಡಿಸಲು ಬಿಜೆಪಿಯವರು ಏನು ಮಾಡಿದ್ದಾರೆ? ಕಿಮ್ಮನೆ ರತ್ನಾಕರ್ಮಾಜಿ ಸಚಿವ