ಜಿಲ್ಲೆ

ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಸರ್ಕಾರ

Gadag - Shivanand Hiremath

ಗದಗ: 60 ವರ್ಷಗಳ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಆರ್ಥಿಕವಾಗಿ ಹಿಂದುಳಿದ ದೇಶವನ್ನು  ಭಾರತೀಯ ಜನತಾ ಪಾರ್ಟಿಯ ನರೇಂದ್ರ ಮೋದಿ ಸರ್ಕಾರ ಕೇವಲ ಹತ್ತು ವರ್ಷಗಳ ದೂರ ದೃಷ್ಟಿಯ ಅಭಿವೃದ್ಧಿಪರ ಆಡಳಿತದಿಂದ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸೂಚಿಯಲ್ಲಿ 11ನೇ ಸ್ಥಾನೇ ಸ್ಥಾನದಿಂದ ಐದನೇ ಜಗತ್ತಿನ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಂಡಿದ್ದು ಹೆಮ್ಮೆ ವಿಷಯ ಇದು ನರೇಂದ್ರ ಮೋದಿಯವರ ದೂರ ದೃಷ್ಟಿಯ ಆಡಳಿತದ ಫಲ. ಬರುವ ಐದು ವರ್ಷದಲ್ಲಿ ಭಾರತವನ್ನು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಸದೃಢ ದೇಶವನ್ನಾಗಿ ಮಾಡುವ ಹಣತೊಟ್ಟ ಮೋದಿಜಿ ಅವರಿಗೆ ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ನಾವೆಲ್ಲರೂ ಭಾರತೀಯ ಜನತಾ ಪಾರ್ಟಿಯ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರಿಗೆ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚಂದ್ರು ಲಮಾಣಿ ಅವರು ಹೇಳಿದರು.
ಬೆಲದಡಿ ತಾಂಡಾದಲ್ಲಿ ಭಾನುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ  ರಾಜ್ಯಮಟ್ಟದ ಸೇವೆ ಸಲ್ಲಿಸಿದ್ದು ಆಡಳಿತದ ಅನುಭವವುಳ್ಳವರು  ಈಗ ರಾಷ್ಟ್ರ ಮಟ್ಟದ  ಸೇವೆಗೆ ಇವರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.
ಜಗತ್ತು ಮೆಚ್ಚಿದ ಸದೃಢ ನಾಯಕ ನರೇಂದ್ರ ಮೋದಿ ಅವರು ಭಾರತಮಾತೆಯ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ದೇಶ ಮೊದಲು ಸಿದ್ಧಾಂತದೊಂದಿಗೆ ಮಾಡಿದ ಅಭಿವೃದ್ಧಿ ಕೆಲಸದಿಂದ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಭಾರತ ತನ್ನದೇ ಆದ ಚಾಪವನ್ನು ಮೂಡಿಸುವಲ್ಲಿ ಸಕ್ಷಮವಾಗಿದೆ ಇಂಥ ಪ್ರಧಾನಮಂತ್ರಿಯನ್ನು ಮತ್ತೊಮ್ಮೆ ಮಗದೊಮ್ಮೆ ಪ್ರಧಾನ ಸೇವಕರನ್ನಾಗಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮೆಲ್ಲರದು ಹಾಗಾಗಿ ನಾವೆಲ್ಲರೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಅವರನ್ನು ಅತಿ ಹೆಚ್ಚು  ಬಹುಮತದಿಂದ ಆಯ್ಕೆ  ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ್ ಮಾತನಾಡಿದರು.
ಕರೋನದಂತ ಮಹಾಮಾರಿಯಲ್ಲಿ ದೇಶದ ಜನರ ಆರೋಗ್ಯ ಕಾಪಾಡುವುದರೊಂದಿಗೆ ಜಗತ್ತಿಗೆ ವ್ಯಾಕ್ಸಿನ್ ಹಂಚುವುದರ ಮೂಲಕ ವಸುದೇವ ಕುಟುಂಬಕಂ ಎಂಬುವ ಭಾರತದ ಸಂಸ್ಕೃತಿಯನ್ನು ಜಗತ್ತು ಮೆಚ್ಚುವಂತೆ ಮಾಡಿದಲ್ಲದೆ ದೇಶವನ್ನು ಅತಿ ಉನ್ನತ ಅಭಿವೃದ್ಧಿಯತ್ತ ಕೊಂಡಿದ್ದ ಭಾರತಮಾತೆ ಪ್ರಧಾನ ಸೇವಕರಾದ ನರೇಂದ್ರ ಮೋದಿ ಅವರನ್ನು ಇನ್ನಷ್ಟು ಶಕ್ತಿ ತುಂಬಲು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ ಆದ್ದರಿಂದ ಕಾರ್ಯಕರ್ತರು ಅತಿ ಹೆಚ್ಚು ಮತದಾನ ಮಾಡಲು ಜನರನ್ನು ಜಾಗೃತಗೊಳಿಸುವ ಮೂಲಕ ಬಸವರಾಜ್ ಬೊಮ್ಮಾಯಿ ಅವರಿಗೆ ಮತ್ತೆ ನೀಡುವಂತೆ ಮನವೊಲಿಸಬೇಕೆಂದು ಗದಗ್ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜು ಕುರುಡಗಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಸವಣ್ಣಪ್ಪ ಚಿಂಚಲಿ, ಅಶೋಕ್ ಸಂಕಣ್ಣವರ್, ಬದ್ರೇಶ ಕುಶಲಪುರ್, ಗ್ರಾಮೀಣ ಮಂಡಲ ಅಧ್ಯಕ್ಷರಾದ ದ್ಯಾಮಣ್ಣ ನೀಲಗುಂದ, ಪ್ರಧಾನ ಕಾರ್ಯದರ್ಶಿ ಬೂದಪ್ಪ ಹಳ್ಳಿ, ಎಚ್. ಸಿ. ಮಂಜುನಾಥ ಸ್ವಾಮಿ ಪ್ರಧಾನ ಕಾರ್ಯದರ್ಶಿ, ಅಮರನಾಥ್ ಬೆಟಗೇರಿ, ಅಮರನಾಥ ಗಡಗಿ, ಸುಧೀರ ಕಾಟಿಗಾರ, ವೆಂಕಟೇಶ್ ಹಬೀಬ್, ವಿನಾಯಕ ಹಬೀಬ್, ಟಿ. ಡಿ. ಪೂಜಾರ, ಬಾಗಪ್ಪ ವಗ್ಗರ, ಮಂಜುನಾಥ ಹಳ್ಳುರಮಠ, ವಿಠ್ಠಲ್ ತೋಟದ, ಶರಣಪ್ಪ ಚಿಂಚಲಿ, ಪರಮೇಶ್ ನಾಯಕ್, ಭೋಜಪ್ಪ ಲಮಾಣಿ, ಕುಮಾರ್ ಕಟ್ಟಿಮನಿ, ಮಂಜು ವಡ್ಡರ, ಮುತ್ತು ಇಟಗಿಮಠ, ಗಣೇಶ್ ಗಂಟಿ, ಶರಣಪ್ಪ ಚಿತ್ತಲಿ, ಸುರೇಶ್ ಚೌಹಾಣ ಸೇರಿದಂತೆ ಗ್ರಾಮೀಣ ಭಾಗದ ಪದಾಧಿಕಾರಿಗಳು ಕಾರ್ಯಕರ್ತರು ಸಭೆಯಲ್ಲಿ
ಪಾಲ್ಗೊಂಡಿದ್ದರು.