ಜಿಲ್ಲೆ

ತ್ರಿವರ್ಣ ಧ್ವಜ ತಯಾರಕರಿಗೆ ಬಿಜೆಪಿ ಸನ್ಮಾನ

ಹುಬ್ಬಳ್ಳಿ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಹಾನಗರ ಜಿಲ್ಲಾ ಬಿಜೆಪಿ ಎಸ್​ಸಿ ಮೋರ್ಚಾ ವತಿಯಿಂದ ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತ್ರಿವರ್ಣ ಧ್ವಜ ತಯಾರಕರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶನಿವಾರ ಸನ್ಮಾನಿಸಲಾಯಿತು.

ಖಾದಿ ಗ್ರಾಮೋದ್ಯೋಗ ಕೇಂದ್ರದ ಅಧ್ಯಕ್ಷ ಕೆ.ಸಿ. ಪತ್ತಾರ ಮಾತನಾಡಿ, ಧ್ವಜ ನೀತಿ ಸಂಹಿತೆಯಿಂದಾಗಿ ಖಾದಿ ಗ್ರಾಮೋದ್ಯೋಗ ನಷ್ಟದ ಹಾದಿಯಲ್ಲಿದೆ. ಸರ್ಕಾರಿ ಕಚೇರಿಯವರಾದರೂ ಖಾದಿ ಧ್ವಜ ಖರೀದಿಸಬೇಕು ಎಂದರು.

ಪ್ರತಿಕ್ರಿಯೆ ನೀಡಿದ ಸಚಿವ ಪ್ರಲ್ಹಾದ ಜೋಶಿ, ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಮಹೇಶ ಟೆಂಗಿನಕಾಯಿ, ಮಹಾಪೌರರಾದ ಜೊ್ಯೕತಿ ಪಾಟೀಲ, ಉಪ ಮಹಾಪೌರ ಸಂತೋಷ ಚವ್ಹಾಣ, ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಿಗಿ, ಶಿವು ಮೆಣಸಿನಕಾಯಿ, ವಸಂತ ನಾಡಜೋಶಿ, ಬಸವರಾಜ ಗರಗ, ರಾಜು ಕಾಳೆ, ಪಾಲಿಕೆ ಸದಸ್ಯ ಭೀರಪ್ಪ ಖಂಡೇಕರ, ನಾರಾಯಣ ಜರತಾರಘರ, ಹನುಮಂತ ಹರಿವಾಣ, ಮಂಜುನಾಥ ಬಿಜವಾಡ, ಸುಭಾಷ ಅಂಕಲಕೋಟೆ, ಖಾದಿ ಗ್ರಾಮೋದೊ್ಯೕಗ ಮಂಡಳಿ ಕಾರ್ಯುದರ್ಶಿ ಶಿವಾನಂದ ಮಠಪತಿ, ಮಂಜುನಾಥ ಕೊಂಡಪಲ್ಲಿ, ಸದಾನಂದ ಭಜಂತ್ರಿ, ವಿಜಯ ಗುಂಟ್ರಾಳ, ರಾಘವೇಂದ್ರ ಅರವೇಡ, ಶ್ರೀಧರ ಕಂದನಾಳ, ಶ್ರೀನಿವಾಸ ಕಟ್ಟಿಮನಿ, ಅರುಣ ಅರಕೇರಿ, ಮಾರುತಿ ಕುಲಾವಿ ಹಾಗೂ ಇತರರು ಉಪಸ್ಥಿತರಿದ್ದರು.