ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಶೀಘ್ರ ೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಆರಂಭಿಸಿದ್ದು, ಸ್ಥಳೀಯ ಸಂಸದ ಎ.ನಾರಾಯಣಸ್ವಾಮಿ ಅನುಪಸ್ಥಿತಿ ಕ್ಷೇತ್ರದಾದ್ಯಂತ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ಅವರಿಗೆ ಶಿರಾ ಕ್ಷೇತ್ರದಲ್ಲಿ ಲೀಡ್ ಕೊಟ್ಟಿದ್ದು, ಜನರೊಂದಿಗೆ ಹೆಚ್ಚು ಕಾಣಿಸಿಕೊಂಡಿದ್ದು ಕಡಿಮೆ. ಹಾಗಾಗಿ, ಈಗ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಮುಖಂಡರಿಗೆ ಸಂಸದರೆಲ್ಲಿ? ಎಂದು ಜನರೇ ಪ್ರಶ್ನಿಸುತ್ತಿರುವುದು ಸಾಕಷ್ಟು ಮುಜುಗರ ಉಂಟು ಮಾಡುತ್ತಿದೆ.
ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದು, ಈ ಸಂದರ್ಭದಲ್ಲಿಯೂ ಬಹುತೇಕ ಕಡೆಗಳಲ್ಲಿ ಸಂಸದರು ಕ್ಷೇತ್ರಕ್ಕೆ ಕಾಲಿಟ್ಟಿಲ್ಲ ಎಂಬ ಬಗ್ಗೆಯೇ ಜನರು ಪ್ರಶ್ನಿಸುತ್ತಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಾಗಲೆಲ್ಲಾ ಶಿರಾ ಕ್ಷೇತ್ರದಲ್ಲಿಯೂ ಬಿಜೆಪಿಗೆ ಮನ್ನಣೆ ನೀಡಲಾಗಿದೆ, ಈ ಹಿಂದೆ ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ಕಿರಣ್‌ಕುಮಾರ್ ಗೆಲುವಿಗೆ ಅಂದು ಲೋಕಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಕುಂಚಿಟಿಗ ಸಮುದಾಯದ ಮೂಡಲಗಿರಿಯಪ್ಪ ಕಣಕ್ಕಿಳಿದಿದ್ದು ಕಾರಣವಾಗಿತ್ತು.
2018ರಲ್ಲಿ ಎಸ್.ಆರ್.ಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು ಕ್ಷೇತ್ರದಲ್ಲಿ ಶೇ.9.41 ಮತ ಮಾತ್ರ ಪಡೆದಿದ್ದರು, 2013ರಲ್ಲಿ ಬಿ.ಕೆ.ಮಂಜುನಾಥ್ ಶೇ.11.84 ಹಾಗೂ 2008ರಲ್ಲಿಯೂ ಬಿ.ಕೆ.ಮಂಜುನಾಥ್ 24025 ಮತಪಡೆದು ಒಟ್ಟು ಮತದಲ್ಲಿ ಶೇ.17.79 ಮತ ಪಡೆದಿದ್ದು ಈ ವರೆಗೆ ಪಡೆದಿರುವ ಗರಿಷ್ಟ ಮತ. ಪ್ರಸ್ತುತ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ಕಸರತ್ತು ಆರಂಭಿಸಿದೆ.
ಜೆಡಿಎಸ್‌ನಲ್ಲಿ ಕ್ಷೇತ್ರ ಉಳಿಸಿಕೊಳ್ಳುವ ಯಾವುದೇ ಕಸರತ್ತು ಆರಂಭವಾಗಿಲ್ಲ, ಬಿ.ಸತ್ಯನಾರಾಯಣ ಅವರ ಬಗ್ಗೆ ಕ್ಷೇತ್ರದಲ್ಲಿ ಜನರಿಗಿದ್ದ ಭಾವನಾತ್ಮಕ ಪ್ರೀತಿ ಕ್ಷೇತ್ರದಲ್ಲಿ ಇನ್ನಾವುದೇ ಮುಖಂಡರಿಗೆ ಇಲ್ಲದಿರುವುದು ಸಮರ್ಥ ಅಭ್ಯರ್ಥಿಯ ಹುಡುಕಾಟವೇ ಪಕ್ಷಕ್ಕೆ ತಲೆನೋವಾಗಿದೆ.ಚುನಾವಣೆ ಗೆಲ್ಲಲು ಕಾರ್ಯತಂತ್ರ ರೂಪಿಸಲು ಕೆಪಿಸಿಸಿ ರೂಪಿಸಿದ್ದ 17 ಮುಖಂಡರ ಸಮಿತಿಗೆ ಕ್ಷೇತ್ರದ ಪರಿಚಯವೇ ಇಲ್ಲ. ಮಾಜಿ ಸಚಿವ ಚಲುವರಾಯಸ್ವಾಮಿಗೆ ನೇತೃತ್ವ ನೀಡಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚಿಸಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಬದಲಾದ ಪಟ್ಟಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಪ್ಪಿಗೆ ಪಡೆದು ಚುನಾವಣೆ ಪ್ರಚಾರಕ್ಕೆ ಚಾಲನೆ ಸಿಗಬಹುದು.
ಹಠವಿಡಿದವರನ್ನ ಸಮಾಧಾನಿಸಿ !: ಕಾಂಗ್ರೆಸ್ ಟಿಕೆಟ್ ಬಗ್ಗೆ ಊಹಾಪೋಹಕ್ಕೆ ತೆರೆಬಿದ್ದಿದ್ದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಥಳೀಯ ನಾಯಕರಿಗೆ ಖಚಿತಪಡಿಸಿದ್ದು ಪಕ್ಷದ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಟಿಕೆಟ್ ಬಯಸಿದ್ದ ಡಾ.ರಾಜೇಶ್‌ಗೌಡ ಎಂದೂ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ ಎಂಬ ಕಾರಣಕ್ಕೆ ಜಯಚಂದ್ರ ಕೈತಪ್ಪಿಸಿ ಟಿಕೆಟ್ ನೀಡಲು ವರಿಷ್ಠರು ಮನಸ್ಸು ಮಾಡಿಲ್ಲ ಎನ್ನಲಾಗಿದೆ, ಕಳೆದ ಲೋಕಸಭಾ ಚುನಾವಣೆಲ್ಲಿ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನೆಡೆಯ ಕಾರಣವಿಟ್ಟುಕೊಂಡು ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ ಕೆಲವು ನಾಯಕರು ಜಯಚಂದ್ರಗೆ ಟಿಕೆಟ್ ನೀಡಬಾರದು ಎಂದು ಹಠವಿಡಿದಿದ್ದು ಇವರನ್ನೆಲ್ಲಾ ಸಮಾಧಾನಿಸಬೇಕು ಎಂದು ಜಯಚಂದ್ರ ಅವರಿಗೂ ಸಿದ್ದರಾಮಯ್ಯ ಟಾಸ್ಕ್ ನೀಡಿದ್ದಾರೆ ಎಂಬ ಗುಸುಗುಸು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಕೈ ಲೆಕ್ಕಾಚಾರವೇನು?: 1.2008, 2013, 2018ರಲ್ಲಿನ ಚುನಾವಣೆ ಪ್ರಕಾರ ಕಾಂಗ್ರೆಸ್- ಜೆಡಿಎಸ್ ನಡುವೆ ನೇರ ಪೈಪೋಟಿ, ಬಿಜೆಪಿ ಮೂರು ಬಾರಿ ಪೈಪೋಟಿ ನೀಡುವಷ್ಟು ಮತ ಪಡೆದಿಲ್ಲ. ಆದರೆ, ಈ ಬಾರಿ ಮತ ಗಳಿಕೆಯನ್ನು ಹೆಚ್ಚಿಸಿ ಪೈಪೋಟಿಕೊಡಬಹುದು. 2.ಶಾಸಕರಾಗಿದ್ದ ಸತ್ಯನಾರಾಯಣ ನಿಧನದಿಂದ ಜೆಡಿಎಸ್ ಅನುಕಂಪದ ತಂತ್ರ ಅನುಸರಿಸಿದರೂ ಮತ ಗಳಿಕೆ ಹೆಚ್ಚಿಸುವುದು ಕಷ್ಟ ಸಾಧ್ಯ. ಕಳೆದ ಚುನಾವಣೆ ಸೋತ ಟಿ.ಬಿ.ಜಯಚಂದ್ರಗೂ ಅನುಕಂಪ ಕೈ ಹಿಡಿಯುವ ಸಾಧ್ಯತೆ. 3. 55 ಸಾವಿರದಷ್ಟು ಎಸ್ಸಿ, 45 ಸಾವಿರ ಗೊಲ್ಲರು, 40 ಸಾವಿರ ವಕ್ಕಲಿಗರು, 12 ಸಾವಿರ ಮುಸ್ಲಿಮರು ಮತ್ತು 10 ಸಾವಿರ ಕುರುಬರು ಕ್ಷೇತ್ರದಲ್ಲಿದ್ದು, ಮತ ಸಮೀಕರಣ ಮಾಡಲು ಆಯಾ ಜಾತಿಯ ಮುಖಂಡರಿಗೆ ಜವಾಬ್ದಾರಿ ನೀಡುವುದು. 4.ಬಿಜೆಪಿಗೆ ಸೋತರೆ ನಷ್ಟವೇನಿಲ್ಲ, ತಮ್ಮ ಅಭ್ಯರ್ಥಿ ಗೆದ್ದರೆ ಪಕ್ಷದ ಮುಂದಿನ ಚಟುವಟಿಕೆಗೆ ಹೊಸ ಹುರುಪು ಸಿಕ್ಕಂತೆ, ಯಾವುದೇ ಕಾರಣಕ್ಕೂ ಕ್ಷೇತ್ರ ಕೈಬಿಡದಂತೆ ನೋಡಿಕೊಳ್ಳುವುದು. 5.ದೊಡ್ಡ ಅಂತರದ ಲಿತಾಂಶ ಕೊಡುವ ಕ್ಷೇತ್ರವಲ್ಲ. 10-15 ಸಾವಿರ ವಷ್ಟೇ ಗೆಲುವಿನ ಅಂತರ ಇರಲಿದೆ. ತ್ರಿಕೋನ ಸ್ಪರ್ಧೆಗೆ ಅವಕಾಶವಾಗಿ ನೆಲೆ ಇಲ್ಲದ ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಟ್ಟರೆ ಭವಿಷ್ಯದ ಮೇಲೂ ಪರಿಣಾಮ, ಹೀಗಾಗಿ ಮೈಮರೆಯುವಂತಿಲ್ಲ.