ಜಿಲ್ಲೆ

ಬಿಜೆಪಿ ಜಾತಿ ಆಧಾರದಲ್ಲಿ ರಾಜಕಾರಣ ಮಾಡಲ್ಲ


ಕೊಡಗು : ಭಾರತೀಯ ಜನತಾ ಪಕ್ಷ ಯಾವತ್ತೂ ಜಾತಿ ಆಧಾರಿತ ರಾಜಕಾರಣ ಮಾಡುವುದಿಲ್ಲ. ಗೌಡರು ಸ್ವಾಭಿಮಾನಿಗಳು, ಪ್ರಜ್ಞಾವಂತರು. ಯಾರ ಒತ್ತಡಕ್ಕೂ ಮಣಿಯದೆ ಮತದಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ತಿಳಿಸಿದರು.


ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಚುನಾವಣೆ ರಂಗು ಪಡೆದುಕೊಳ್ಳುತ್ತಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಇದರಲ್ಲಿ ಕೊಂಚ ಮುಂದಿದೆ. ಒಕ್ಕಲಿಗ ಮತದಾರರನ್ನ ಸೆಳೆಯಲು ಎರಡು ಪಕ್ಷಗಳು ಸಜ್ಜುಗೊಂಡು ಸಾಕಷ್ಟು ಕಸರತ್ತು ನಡೆಸುತ್ತಿದೆ ಎಂದರು.


ರಾಮನವಮಿ ವೇಳೆ ರಾಮ ಭಕ್ತರ ಮೇಲಿ ನಡೆದ ಹಲ್ಲೆಯನ್ನು ಖಂಡಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭಯೋತ್ಪಾದಕರಿಗೆ, ಕಾನೂನು ಸುವ್ಯವಸ್ಥೆ ಹಾಳು ಮಾಡುವವರಿಗೆ ಕಾಂಗ್ರೆಸ್ ನ ಈ ಕಾಲಘಟ್ಟ ಸ್ವರ್ಗವಾಗಿ ಪರಿಣಮಿಸಿದೆ ಎಂದು ಕಟುವಾಗಿ ಟೀಕಿಸಿದರು.


ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಈ ಗ್ಯಾರಂಟಿ ಯೋಜನೆಗಳು ದುಡಿಯುವ ಕೈಗಳನ್ನ ಎಲ್ಲೋ ದೂರ ಮಾಡುತ್ತಿವೆ ಎಂದು ಹೇಳಿದ್ದಾರೆ ಎಂದು ಸದಾನಂದ ಗೌಡ ಸಮರ್ಥಿಸಿಕೊಂಡರು.
ಕೆ.ಎಸ್.ಈಶ್ವರಪ್ಪ ಅವರ ಮನವೊಲಿಕೆ ಯತ್ನವನ್ನು ಪಕ್ಷದ ಹೈಕಮಾಂಡ್ ಮಾಡುತ್ತಿದೆ. ಈಗಾಗಲೇ ಸಾಕಷ್ಟು ಪ್ರಯತ್ನಗಳು ವಿಫಲವಾಗಿದೆ. ಕ್ರಮ ಕೈಗೊಳ್ಳುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.


ದೇಶದಲ್ಲಿ ಬಿಜೆಪಿ 150 ರಿಂದ 180 ಕ್ಕೆ ಕುಸಿಯುತ್ತದೆ ಎನ್ನುವ ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸದಾನಂದ ಗೌಡ, ಕಾಂಗ್ರೆಸ್ ದೇಶದಲ್ಲಿ ಕೇವಲ 200 ಸ್ಥಾನಗಳಿಗೆ ಮಾತ್ರ ಸ್ಪರ್ಧೆ ಮಾಡುತ್ತಿದೆ. ಪ್ರಧಾನಿ ಆಗಬೇಕು ಎಂದರೆ 271 ಕಿಂತ ಹೆಚ್ಚು ಸ್ಥಾನ ಗೆಲ್ಲಬೇಕು. 270 ಕ್ಷೇತ್ರದಲ್ಲಿ ಕಂಟೆಸ್ಟ್ ಮಾಡದ ಕಾಂಗ್ರೆಸ್ ನಮಗೆ ಹೇಳುತ್ತಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನವರು ಆಡಳಿತ ಮಾಡುತ್ತಾರೆ ಎಂದರೆ ಹಾಸ್ಯಾಸ್ಪದ. ಇನ್ನು ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸುವ ಕೆಲವು ನಾಯಕರು ನಾವೇ ಪ್ರಧಾನಿ ಹಾಗುತ್ತೇವೆ ಎನ್ನುತ್ತಾರೆ. ಬಿಜೆಪಿ ಒಂದೇ ದೇಶದಲ್ಲಿ 400 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದು. ಎನ್‌ಡಿಎಯಲ್ಲಿ 400 ಕಿಂತಲ್ಲೂ ಹೆಚ್ಚು ಸ್ಥಾನ ಪಡೆಯುವುದು ನಿಶ್ಚಿತ ಎಂದರು.


ಬಿಜೆಪಿ ದೇಶ ಪ್ರೇಮಿಗಳ ಸಂಘಟನೆ. ದೇಶದ ಹಿತಾಸಕ್ತಿ, ಘನತೆ ಗೌರವಗಳಿಗಾಗಿ ಕೆಲಸ ಮಾಡುತ್ತದೆ. ರಾಜ್ಯದಲ್ಲಿ ಗೌಡರೆಲ್ಲ ಸ್ವಾಭಿಮಾನಿಗಳು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸದಾನಂದಗೌಡ ಅಥವಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರೆಂದು ಓಟು ಹಾಕುವವರಲ್ಲ. ಎಲ್ಲದರ ಬಗ್ಗೆ ಚಿಂತಿಸಿ ಓಟು ಹಾಕುತ್ತಾರೆ. ಅದರಲ್ಲೂ ಕೊಡಗು ಎಂದರೆ ದೇಶ ಪ್ರೇಮಿಗಳಿರುವ ಜಿಲ್ಲೆ ಎಂದು ಡಿ.ಕೆ.ಶಿವಕುಮಾರ್‌ಗೆ ಟಾಂಗ್ ನೀಡಿದರು. ಕುಶಾಲನಗರ ತಾಲೂಕು ವ್ಯಾಪ್ತಿಯ ಜೆಡಿಎಸ್ ಹಾಗೂ ಬಿಜೆಪಿಯ ಪ್ರಮುಖ ನಾಯಕರು ಸಭೆಯಲ್ಲಿ ಹಾಜರಿದ್ದರು.