ಜಿಲ್ಲೆ

ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಆರ್​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ 11 ಜನ ಅಮಾಯಕರು ಸಾವಿಗೀಡಾಗಲು ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯೇ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ, ಸುಲಿಗೆ ಹೆಚ್ಚುತ್ತಿವೆ ಎಂದು ದೂರಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರಾಜೀನಾಮೆಗೆ ಒತ್ತಾಯಿಸಿದರು.

ಬಿಜೆಪಿ ಪ್ರಮುಖರಾದ ದತ್ತಮೂರ್ತಿ ಕುಲಕರ್ಣಿ, ಪ್ರವೀಣ ಪವಾರ, ರಾಮನಗೌಡ ಶೆಟ್ಟನಗೌಡ್ರ, ತೋಟಪ್ಪ ನೀಡಗುಂದಿ, ಕೃಷ್ಣಾ ಗಂಡಗಾಳೇಕರ, ಚನ್ನು ಹೊಸಮನಿ, ಚಂದ್ರಿಕಾ ಮೇಸ್ತ್ರಿ, ಉಮಾ ಮುಕುಂದ, ರೂಪಾ ಶೆಟ್ಟಿ, ಅಕ್ಕಮ್ಮ ಹೆಗಡೆ, ವೆಂಕಟೇಶ ಕಾಟವೆ, ಸಂಗೀತಾ ಬದ್ದಿ , ಸುಮಾ ಶಿವನಗೌಡ, ಕೆ. ಅರ್ಚನಾ, ಮಲ್ಲಿಕಾರ್ಜುನ ಮರಿಗೌಡ, ಎಸ್.ಎಚ್. ಕಿರಣ, ಮಂಜುನಾಥ ಹಳಿಯಾಳ, ಪವನ ಹಳಿಯಾಳ, ವೆಂಕಟೇಶ ಚಿಚಡಿ, ಡಿ. ರಘು ಹಾಗೂ ಇತರರು ಇದ್ದರು.