ಗಣ್ಯರಿಗೆ ಡಾ. ಧನಂಜಯ ಸರ್ಜಿ ಹೆಸರಲ್ಲಿ ಕಹಿ ತಿನಿಸು ಕಳುಹಿಸಿದವರನ್ನು ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನೇತೃತ್ವದ ನಿಯೋಗವು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿತು. ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಎಸ್.ದತ್ತಾತ್ರಿ, ಕೆ.ಜಿ.ಕುಮಾರಸ್ವಾಮಿ, ಎಂ.ಬಿ.ಹರಿಕೃಷ್ಣ, ಸಿ.ಎಚ್.ಮಾಲತೇಶ್, ಎನ್.ಜಿ.ನಾಗರಾಜ್, ಎಸ್.ಜ್ಞಾನೇಶ್ವರ್ ಇದ್ದರು. 
ಜಿಲ್ಲೆ

ಗಣ್ಯರಿಗೆ ಕಹಿ ತಿನಿಸು ಕಳುಹಿಸಿದ ಕಿಡಿಗೇಡಿ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಶಿವಮೊಗ್ಗ: ಅನಾಮಧೇಯ ಪತ್ರದೊಂದಿಗೆ ಹೊಸ ವರ್ಷದ ಶುಭಾಶಯ ಹೇಳುವ ನೆಪದಲ್ಲಿ ಮೂವರು ಗಣ್ಯರಿಗೆ ಕಹಿ ತಿನಿಸು ಕಳುಹಿಸಿದ ಕಿಡಿಗೇಡಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ತನಿಖೆ ಚುರುಕುಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ನೇತೃತ್ವದಲ್ಲಿ ಮುಖಂಡರ ನಿಯೋಗವು ಶನಿವಾರ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿತು.

ಹೊಸ ವರ್ಷದ ಶುಭಾಶಯಗಳು ಕೋರಿರುವಂತಹ ಪತ್ರದೊಂದಿಗೆ ಕಹಿಭರಿತ ಸಿಹಿತಿಂಡಿ ಕೆಲ ಮುಖಂಡರು ಹಾಗೂ ಗಣ್ಯರಿಗೆ ಕಳುಹಿಸಿ ಡಾ.ಧನಂಜಯ ಸರ್ಜಿ ಅವರ ಹೆಸರಿಗೆ ಮಸಿ ಬಳಿಯುವ ಕೃತ್ಯ ನಡೆಸಿರುವುದು ಖಂಡನೀಯ. ಈ ಬಗ್ಗೆ ದೂರು ದಾಖಲು ಮಾಡಲಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಅಪರಿಚಿತನನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಬಿ.ಹರಿಕೃಷ್ಣ, ಸಿ.ಎಚ್.ಮಾಲತೇಶ್, ಸೂಡಾ ಮಾಜಿ ಅಧ್ಯಕ್ಷ ಎನ್.ಜಿ.ನಾಗರಾಜ್, ಮುಖಂಡರಾದ ಎಸ್.ಜ್ಞಾನೇಶ್ವರ್, ಗ್ರಾಮಾಂತರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರೋಹಿಣಿ, ದರ್ಶನ್, ಅನಿಲ್ಕುಮಾರ್, ಸಂದೀಪ್ ಬೇಡರಹೊಸಳ್ಳಿ, ಹರೀಶ್, ಸಂಜು ಹಿಟ್ಟೂರು ಮತ್ತಿತರರು ಹಾಜರಿದ್ದರು.