ಹುಬ್ಬಳ್ಳಿ: ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವೋಟ್ ಬ್ಯಾಂಕ್, ಜಾತಿ ಆಧಾರಿತ ಸರ್ಕಾರಗಳು ತೊಲಗಿ, ಅಭಿವೃದ್ಧಿ ಪರ ಸರ್ಕಾರ ಬಂದಿದೆ. ಮೋದಿ ಸರ್ಕಾರವು ಬಡವರು, ಯುವಕರು, ಅನ್ನದಾತರು, ನಾರಿಯರು (ಗ್ಯಾನ್- ಜಿವೈಎಎನ್) ಹೀಗೆ ಎಲ್ಲ ಸಮುದಾಯದವರನ್ನು ಜೋಡಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯ ಜೆ.ಪಿ. ನಡ್ಡಾ ಪ್ರತಿಪಾದಿಸಿದರು.
ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಭಾನುವಾರ ಏರ್ಪಾಟಾಗಿದ್ದ ಧಾರವಾಡ ಲೋಕಸಭಾ ೇತ್ರದ ವಿವಿಧ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಹುಲ್ ಗಾಂಧಿ ಅವರು ಅರವತ್ತು ವರ್ಷ ತಮ್ಮದೇ ಸರ್ಕಾರ ಮಾಡದೆ ಇರುವ ಬಡತನ ನಿರ್ಮೂಲನೆ ಕಾರ್ಯವನ್ನು ಮಾಡುತ್ತೇನೆಂದು ಈಗ ಹೇಳುತ್ತಿರುವುದು ಹಾಸ್ಯಾಸ್ಪದ ಎಂದರು.
80 ಕೋಟಿ ಭಾರತೀಯರಿಗೆ ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಭದ್ರತೆ ನೀಡಲಾಗಿದೆ. ಅದರಲ್ಲಿ ಕರ್ನಾಟಕದ ನಾಲ್ಕು ಕೋಟಿ ಜನರೂ ಇದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಇಪ್ಪತೆದು ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಇದು ಮೋದಿ ಸರ್ಕಾರದ ಸಾಧನೆ ಎಂದರು.
ಯುಪಿಎ ಸರ್ಕಾರದಲ್ಲಿ ಕತ್ತಲ ದಿನಗಳನ್ನು ನೋಡಿದ್ದ ನಮಗೆ ಈಗಷ್ಟೇ ಬೆಳಕಿನ ದಿನಗಳು ಕಾಣುತ್ತಿವೆ ಎಂದು ಮೋದಿ ಸರ್ಕಾರದ ಸಾಧನೆಗಳ ಪಟ್ಟಿ ಮಾಡಿದರು.
ವಿಕಸಿತ ಭಾರತ ಸಂಕಲ್ಪದೊಂದಿಗೆ ಮುನ್ನಡೆಯುತ್ತಿರುವ ಮೋದಿ ಸರ್ಕಾರಕ್ಕೆ ಮತ್ತೆ ಅಧಿಕಾರ ನೀಡಬೇಕಿದೆ. ಇದು ಪ್ರಲ್ಹಾದ ಜೋಶಿ ಅವರ ಚುನಾವಣೆ ಅಲ್ಲ, ಇದು ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವ ಚುನಾವಣೆ ಎಂದು ನಡ್ಡಾ ಹೇಳಿದರು.
ಇಂಡಿಯಾ ಎಂಬುದು ಮಂಡಿಯಾ ಅಲೈಯನ್ಸ್ ಎಂದು ಜರಿದ ನಡ್ಡಾ, ಇದರಲ್ಲಿ ಇರುವವರು ಎಲ್ಲರೂ ಪರಿವಾರದ ಪಾಟಿರ್ಗಳಿಂದ ಬಂದವರು. ಈ ಪಗಳ ಅರ್ಧ ನಾಯಕರು ಜಾಮೀನಿನ ಮೇಲೆ ಇದ್ದರೆ, ಇನ್ನರ್ಧ ನಾಯಕರು ಜೈಲಿನಲ್ಲಿದ್ದಾರೆ ಎಂದರು.
ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಮಾತನಾಡಿ, ಮೋದಿ ಸರ್ಕಾರ ಬಂದ ನಂತರ 25 ಸಾವಿರ ಕೋಟಿ ರೂ. ಅಭಿವೃದ್ಧಿ ಕೆಲಸಗಳು ಧಾರವಾಡದಲ್ಲಿ ಆಗಿವೆ. ಧಾರವಾಡ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.
ವಿಧಾನಸಭೆ ಪ್ರತಿಪದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಮಹಾತ್ಮ ಗಾಂಧಿ ಒಬ್ಬರೇ ಎಲ್ಲ ಜಾತಿ, ಜನಾಂಗ ಸಮುದಾಯಗಳನ್ನು ಜತೆಗೆ ಕರೆದುಕೊಂಡು ಹೋಗುವ ಶಕ್ತಿ ಹೊಂದಿದ್ದರು. ಅವರ ನಂತರ ಮೋದಿ ಮಾತ್ರ ಆ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಮನ ಮುಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ಅಶೋಕ ಕಾಟವೆ, ಸೀಮಾ ಮಸೂತಿ, ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಸಂಜಯ ಕಪಟಕರ, ಇತರರು ಇದ್ದರು.
ಮಾ. ನಾಗರಾಜ ಸ್ವಾಗತಿಸಿದರು. ಲಿಂಗರಾಜ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ತಿಪ್ಪಣ್ಣ ಮಜ್ಜಗಿ ವಂದಿಸಿದರು.