ಜಿಲ್ಲೆ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಅಸ್ತು :<br>ಹೊಸಪೇಟೆಯಲ್ಲಿ ಬಿಜೆಪಿ ಸಂಭ್ರಮಾಚರಣೆ

Vijayanagara - Veerendra

ಹೊಸಪೇಟೆ: ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಸಮ್ಮತಿಸಿರುವುದನ್ನು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ನಗರದ ಪುನೀತ್ ರಾಜ್ ಕುಮಾರ್ ಸರ್ಕಲ್ ನಲ್ಲಿ ಶನಿವಾರ ಪರಸ್ಪರ ಸಿಹಿ ಹಂಚಿಕೊಂಡು, ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.

ವಾಲ್ಮೀಕಿ ಸಮಾಜದ ಮುಖಂಡ ಕಿಚಿಡಿ ಶ್ರೀನಿವಾಸ ಮಾತನಾಡಿ, ನ್ಯಾ.ನಾಗಮೋಹನ್ ದಾಸ್ ವರದಿ ಶಿಫಾರಸ್ಸಿನಂತೆ ಎಸ್‌ಸಿಗೆ ಶೇ.೧೫ ರಿಂದ ೧೭ ಹಾಗೂ ಎಸ್‌ಟಿಗೆ ಶೇ.೩ ರಿಂದ ೭ ಕ್ಕೆ ಮೀಸಲಾತಿ ಹೆಚ್ಚಿಸಲು ಸರ್ವ ಪಕ್ಷ ಸಭೆ ಒಪ್ಪಿಗೆ ಸೂಚಿಸಿದೆ.
ಹಲವು ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ಮೀಸಲಾತಿ ಹೆಚ್ಚಳಕ್ಕೆ ಮುಂದಾಗಿರುವುದು‌ ಸ್ವಾಗತಾರ್ಹ. ಸರ್ಕಾರ ಈ ಎರಡು ಸಮುದಾಗಳ ಮೀಸಲಾತಿಯನ್ನು ಹೆಚ್ಚಳ ಮಾಡಿರುವುದು ಅಭಿನಂದನಾರ್ಹ ಎಂದರು.
ಸಂಭ್ರಮಾಚರಣೆಯಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಬಿಜೆಪಿ ಎಸ್‌ಟಿ ಜಿಲ್ಲಾಧ್ಯಕ್ಷ ಸುಭಾಷ್ ನಾಯಕ್, ತಾಲ್ಲೂಕು ಅಧ್ಯಕ್ಷ ಗುಜ್ಜಲ ರಾಮಾಂಜನಿ, ಮಂಡಲ ಅಧ್ಯಕ್ಷ ಕಸಟ್ಟಿ ಉಮಾಪತಿ, ಮುಖಂಡರಾದ ವ್ಯಾಸನಕೇರಿ ಶ್ರೀನಿವಾಸ, ಕಟಗಿ ಜಂಬಯ್ಯ, ಕಟಿಗಿ ರಾಮಕೃಷ್ಣ,  ಬಂಡೆ ಶ್ರೀನಿವಾಸ, ಕಣ್ಣಿ ಶ್ರೀಕಂಠ ಪಾಲ್ಗೊಂಡಿದ್ದರು.