ಜಿಲ್ಲೆ

ಅಧ್ಯಕ್ಷ, ನಿರ್ದೇಶಕರಿಗೆ ಅಭಿನಂದನೆ - ವಿಟ್ಲ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್

Mangaluru - Nishantha Narayana

ವಿಟ್ಲ: ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ೨೦೨೦-೨೦೨೫ರ ಅವಽ ಮುಗಿಯುವ ಹಿನ್ನೆಲೆಯಲ್ಲಿ ಕಳೆದೈದು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿದ ಬ್ಯಾಂಕಿನ ಅಧ್ಯಕ್ಷ ಹಾಗೂ ನಿರ್ದೇಶಕರನ್ನು ವಿಟ್ಲ ಬಿಜೆಪಿ ಕಚೇರಿಯಲ್ಲಿ ಮಹಾಶಕ್ತಿ ಕೇಂದ್ರದ ವತಿಯಿಂದ ಗೌರವಿಸಲಾಯಿತು.

ವಿಟ್ಲ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಜಗನ್ನಾಥ ಸಾಲ್ಯಾನ್ ಅಭಿನಂದಿಸಿದರು. ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಅಧ್ಯಕ್ಷ ನರ್ಸಪ್ಪ ಪೂಜಾರಿ ಕಳೆದ ೫ ವರ್ಷಗಳ ಸಾಧನೆಯನ್ನು ವಿವರಿಸಿ, ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ಮಂಡಲ ಕಾರ್ಯದರ್ಶಿ ಶ್ರೀಕೃಷ್ಣ ವಿಟ್ಲ, ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ವಿಟ್ಲ, ಹಿರಿಯ ಕಾರ್ಯಕರ್ತರಾದ ರಾಮದಾಸ್ ಶೆಣೈ, ಮೋಹನದಾಸ್ ಉಕ್ಕುಡ, ನಿರ್ದೇಶಕರಾದ ಸದಾನಂದ ಗೌಡ, ಶಿವಪ್ಪ ನಾಯ್ಕ್, ದಿನೇಶ್ ಕೋಡಿಬೈಲ್, ರಾಘವೇಂದ್ರ ಪೈ, ವಾಸು ಸಿ.ಎಚ್, ಉದಯ ಕುಮಾರ್ ನಾಯ್ತೊಟ್ಟು, ಗೌರಿ ಎಸ್. ಎನ್ ಭಟ್, ಕವಿತಾ ಮುದೂರು, ಶಕ್ತಿ ಕೇಂದ್ರ ಪ್ರಮುಖ್ ಶಿಶಿರ್ ಗೌಡ, ಅಣ್ಣು ಪೂಜಾರಿ, ವೀರಪ್ಪ ಗೌಡ ಉಪಸ್ಥಿತರಿದ್ದರು.

ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಉದಯಕುಮಾರ್ ಆಲಂಗಾರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಸಿಎಚ್ ವಂದಿಸಿದರು.