ಜಿಲ್ಲೆ

ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ: ಆರ್. ಅಶೋಕ ಆರೋಪ

ಡಿ.ವಿ. ಕಮ್ಮಾರ

ಬೆಳಗಾವಿ: ರಾಜ್ಯದಲ್ಲಿ‌ ಮಳೆಗೆ ಮನೆ, ಬೆಳೆ ಹಾನಿಯಾಗಿದೆ. ಅನೇಕರು ಮನೆಗಳಲ್ಲಿ ನವರಾತ್ರಿ ಮಾಡಬೇಕಾದವರು ಮನೆ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವಂತಾಗಿದೆ. ಆದರೆ‌ ಇದಕ್ಕೆಲ್ಲ ಸ್ಪಂದಿಸಬೇಕಾದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಆಶೋಕ ಆರೋಪಿಸಿದರು.
ಬೆಳಗಾವಿ ಜಿಲ್ಲೆಯ ಮಳೆ ಹಾನಿ ಪರಿಶೀಲನೆಗೆ ಪಕ್ಷದ ನಿಯೋಗದೊಂದಿಗೆ ತೆರಳುವ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಮಳೆ‌ ಬರುವುದು ಗೊತ್ತಾಗುವುದಿಲ್ಲ.
ಬರಗಾಲವೂ ಅರಿವಿಗೆ ಬರುವುದಿಲ್ಲ. ಜನರ ಕಷ್ಟ ಅರವಿಗೆ ಬರದ ದುಷ್ಟ ಸರ್ಕಾರ ಇದಾಗಿದ್ದು,
ಇವರಿಗೆ ‌ಜಾತಿ ಒಂದೇ ಬೇಕಾಗಿರೋದು. ಜಾತಿ ಒಡೆಯುವ ಮೂಲಕ ಮುಖ್ಯಮಂತ್ರಿ ಬೆಂಕಿ ಸಿದ್ದರಾಮಯ್ಯ  ಆಗಿದ್ದಾರೆ ಎಂದು ಟೀಕಿಸಿದರು.
ಮಳೆ ಹಾನಿ ಪರಿಶೀಲನೆ ಬಗ್ಗೆ ಬಿಜೆಪಿ ಪ್ರವಾಸ ಘೋಷಿಸಿದ ಬಳಿಕ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ಪದೇ ಪದೇ ಕೇಂದ್ರ ಸರ್ಕಾರ ನೆರವಿಗೆ ಬರಬೇಕು, ಸಹಾಯ ಮಾಡಬೇಕು ಎಂಬ ಹಳೇ ಡೈಲಾಗ್‌ನ್ನೇ ಹೇಳುತ್ತಿದ್ದಾರೆ. 20 ವರ್ಷದಿಂದ ಸಿಎಂ ಆಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅವರಿಗೆ ಸಾಮಾನ್ಯ ಜ್ಞಾನವಿಲ್ಲವಾ? ಮಳೆ ಹಾನಿಯ ವರದಿ ಪಡೆದು ಕೇಂದ್ರಕ್ಕೆ ಕಳುಹಿಸಬೇಕು. ಹಾನಿ ಸಮೀಕ್ಷೆಗೆ ತಂಡ ಕಳುಹಿಸಿ ಎಂದು ಕೇಳಬೇಕಿತ್ತು. ಆದರೆ ಹಾನಿಯ ಬಗ್ಗೆ ಇವರ ಬಳಿಯೇ ಮಾಹಿತಿ‌ ಇಲ್ಲ. ಸ್ಥಳೀಯವಾಗಿ ಸಚಿವರು ತಂಡ ಮಾಡಿಕೊಂಡು ಪರಿಶೀಲನೆಗೆ ಹೋಗಿಲ್ಲ. ಸಿಎಂ ಸಚಿವರನ್ನು ಕರೆದು ಸಭೆ ಮಾಡಿ ಟಾಸ್ಕ್ ಕೊಟ್ಡಿದ್ದರೆ ಮಳೆ ಅನಾಹುತ ಹೆಚ್ಚಾಗುತ್ತಿರಲಿಲ್ಲ. ಇದರಲ್ಲಿ ಜಿಲ್ಲಾ ಮಂತ್ರಿಗಳ ತಪ್ಪಿಲ್ಲ. ಸರ್ಕಾರದ ಬಳಿ ಹಣವೇ ಇಲ್ಲ. ಹೀಗಾಗಿ ಅವರು ಜಾನಿ ಪ್ರದೇಶಕ್ಕೆ ಹೋಗದೇ ವಿವಿಧ ಎಲೆಕ್ಷನ್ ಮಾಡುತ್ತಿದ್ದಾರೆ.‌ ಎಲೆಕ್ಷನ್ ಮೂಲಕವಾದರೂ ಕಲೆಕ್ಷನ್ ಮಾಡಲು‌ ಮುಂದಾಗಿದಾರೆ ಎಂದು ಟೀಕಿಸಿದರು.