ಜಿಲ್ಲೆ

ದೇವಾಲಯ, ಮನೆಗಳಲ್ಲಿ ಬಿಸು ಪರ್ಬ ಆಚರಣೆ

reportermng


ಮಂಗಳೂರು: ತುಳುನಾಡಿನ ಹೊಸ ವರ್ಷದ ಮೊದಲ ದಿನವಾಗಿ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ‘ಬಿಸು ಪರ್ಬ’ ಶನಿವಾರ ಆಚರಿಸಲಾಯಿತು.


ಕೃಷಿ ಪರಂಪರೆಯ ಆಚರಣೆಯೂ ಆಗಿರುವ ಈ ಹಬ್ಬದಂದು ತುಳುನಾಡಿನಲ್ಲಿ ತಾವು ಬೆಳೆಯುವ ತರಕಾರಿ, ಹಣ್ಣುಗಳನ್ನು ದೇವರ ಕೋಣೆ ಅಥವಾ ಮನೆಯ ಪ್ರಮುಖ ಜಾಗದಲ್ಲಿ ಬೆಳಗ್ಗಿನ ಹೊತ್ತು ಇಟ್ಟು ಪ್ರಕೃತಿ ಮಾತೆ ಮತ್ತು ಮನೆ ದೇವರಲ್ಲಿ ವರ್ಷವಿಡೀ ಉತ್ತಮ ಫಸಲನ್ನು ಕೊಡುವಂತೆ ಪ್ರಾರ್ಥಿಸಿದರು. ಕಿರಿಯರು ಹಿರಿಯರ ಪಾದಕ್ಕೆ ನಮಸ್ಕರಿಸಿ ಆಶೀರ್ವಾದ ಪಡೆದರು. ಹಬ್ಬದೂಟ ಮಾಡಿ ಸಂಭ್ರಮಿಸಿದರು.


ವಿಷು ಹಬ್ಬದ ಹಿನ್ನೆಲೆಯಲ್ಲಿ ನಗರದ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಕುಡುಪು, ಮಹತೋಭಾರ ಶ್ರೀ ಮಂಗಳಾದೇವಿ, ಶರವು ಶ್ರೀ ಮಹಾಗಣಪತಿ ದೇವಳ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕೊಡಿಯಾಲಬೈಲು ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ವಿಶೇಷ ಪೂಜೆ, ವಿಷು ಕಣಿ ಪೂಜೆ, ಹೂವಿನ ಪೂಜೆ, ಸರ್ವಾಲಂಕಾರ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕೆಲವು ಕಡೆ ಪಂಚಾಂಗ ಶ್ರವಣ ಪಠನ ನಡೆಯಿತು.