ಹೂವಿನಹಡಗಲಿಯ ತಹಸಿಲ್ ಕಚೇರಿ ಮುಂಭಾಗ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಎಐಟಿಯುಸಿ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಫೆಡರೇಷನ್ ಜಿಲ್ಲಾಧ್ಯಕ್ಷೆ ಎಚ್.ಅನಸೂಯ, ತಾಲೂಕು ಸಮಿತಿ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಲತಾ ಇತರರಿದ್ದರು. 
ಜಿಲ್ಲೆ

ಬಿಸಿಯೂಟ ತಯಾರಕರಿಗೆ ಸಾಮಾಜಿಕ ಭದ್ರತೆ ಒದಗಿಸಿ

ಹೂವಿನಹಡಗಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಶಾಲೆಯಲ್ಲಿನ ಅವಘಡದಲ್ಲಿ ಮೃತಪಟ್ಟ ಅನ್ನಪೂರ್ಣಮ್ಮರ ಕುಟುಂಬಕ್ಕೆ 25 ಲಕ್ಷ ರೂ. ಒದಗಿಸಲು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಹಾಗೂ ಎಐಟಿಯುಸಿ ಸಂಘಟನೆಗಳು ಜಂಟಿಯಾಗಿ ಪಟ್ಟಣದ ತಹಸಿಲ್ ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದವು.

ಗೌರವ ಧನ ಹೆಚ್ಚಿಸಿ

ಶಾಲೆಯಲ್ಲಿ ಅಡುಗೆ ಮಾಡುವಾಗ ಸಾಂಬಾರು ಪಾತ್ರೆ ಬಿದ್ದರಿಂದ ಅನ್ನಪೂರ್ಣಮ್ಮ ಮೃತಪಟ್ಟಿದ್ದಾರೆ. ಬಿಸಿಯೂಟ ತಯಾರಕರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಅವರಲ್ಲಿ ಜೀವಭಯ ಕಾಡುತ್ತಿದೆ. ಸರ್ಕಾರ ನೀಡುವ ಗೌರವ ಧನದಿಂದ ಬದುಕನ್ನು ಕಟ್ಟಿಕೊಳ್ಳುವುದು ಕಷ್ಟಕರವಾಗಿದೆ ಎಂದು ಫೆಡರೇಷನ್ ಜಿಲ್ಲಾಧ್ಯಕ್ಷೆ ಎಚ್.ಅನಸೂಯ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಅಡುಗೆ ತಯಾರಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಸೂಕ್ತ ಜೀವ ಸುರಕ್ಷಾ ಪರಿಕರಗಳನ್ನು ನೀಡಬೇಕು. ಬಿಸಿಯೂಟ ತಯಾರಕರಿಗೆ 5000 ರೂ. ವೇತನದ ಭರವಸೆಯನ್ನು ಸರ್ಕಾರ ಈಡೇರಿಸಬೇಕು ಎಂದು ಎಐಟಿಯುಸಿ ಜಿಲ್ಲಾ ಸಂಚಾಲಕ ಹಲಗಿ ಸುರೇಶ ಒತ್ತಾಯಿಸಿದರು.
ಫೆಡರೇಷನ್ ತಾಲೂಕು ಸಮಿತಿ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಲತಾ, ಕಾರ್ಯದರ್ಶಿ ಸುನೀತಾ, ಖಜಾಂಚಿ ರೋಹಿಣಿ, ಎಐಕೆಎಸ್ ತಾಲೂಕು ಅಧ್ಯಕ್ಷ ಮುಕುಂದಗೌಡ ಇನ್ನಿತರರಿದ್ದರು.