ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಯಾವುದೇ ಉತ್ಪನ್ನದ ಗುಣಮಟ್ಟ ಕಾಯ್ದುಕೊಳ್ಳಲು ಬಿಐಎಸ್ ಲೈಸನ್ಸ್ ಹೊಂದುವುದು ಬಹಳ ಮುಖ್ಯ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಬಿ.ಎಸ್. ಹೇಳಿದರು.
ಭಾರತೀಯ ಮಾನಕ ಸಂಸ್ಥೆಯ (ಬಿಐಎಸ್) ಹುಬ್ಬಳ್ಳಿ ಶಾಖೆಯಲ್ಲಿ ಗುರುವಾರ ಏರ್ಪಡಿಸಿದ್ದ ಇಂಡಿಯನ್ ಸ್ಟ್ಯಾಂಡರ್ಡ್ಸ್ ಐಎಸ್210:2009 ಕುರಿತ ಮಾನಕ್ (ಮಾನದಂಡ) ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಐಎಸ್ ಹುಬ್ಬಳ್ಳಿ ಶಾಖೆಯ ನಿರ್ದೇಶಕ ಡಿ. ಪ್ರೇಮಕುಮಾರ್ ಮಾತನಾಡಿ, ಮಾನಕ್ ಮಂಥನ ಕಾರ್ಯಕ್ರಮವು ಎಲ್ಲ ಉತ್ಪಾದಕರನ್ನು ತಲುಪುವ ಉದ್ದೇಶವನ್ನು ಹೊಂದಿದೆ. ಪ್ರಮಾಣೀಕರಣ ಪ್ರಕ್ರಿಯೆಯನ್ನು ಉತ್ಪಾದಕರಿಗೆ ತಿಳಿಸಲು ಇದರಿಂದ ಅನುಕೂಲವಾಗಲಿದೆ ಎಂದರು.
ಉಪ ನಿರ್ದೇಶಕರಾದ ಎಂ. ಪ್ರದೀಪಕುಮಾರ್, ಮರ್ಸಿ ರಾಣಿ ಇದ್ದರು. ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.