ದರ್ಶನ್ ಅಭಿನಯದ ಕಾಟೇರ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಡಿ ಬಾಸ್ ಅಭಿಮಾನಿಗಳು ಶಿವಮೊಗ್ಗದಲ್ಲಿ ಬಿರಿಯಾನಿ ವಿತರಿಸಿದರು. 
ಜಿಲ್ಲೆ

ಡಿ ಬಾಸ್ ಅಭಿಮಾನಿಗಳಿಂದ ಬಿರಿಯಾನಿ

Shivamogga - Desk - Praveena Kumar S

ಶಿವಮೊಗ್ಗ: ನಟ ದರ್ಶನ್ ಅಭಿನಯದ ಕಾಟೇರ ಚಿತ್ರ ಪ್ರದರ್ಶನಕ್ಕೆ ಶಿವಮೊಗ್ಗದಲ್ಲೂ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. ನಗರದ ವೀರಭದ್ರೇಶ್ವರ ಚಿತ್ರಮಂದಿರ ಮತ್ತು ಭಾರತ್ ಸಿನಿಮಾಸ್‌ನಲ್ಲಿ ಕಾಟೇರ ಚಿತ್ರ ಬಿಡುಗಡೆಯಾಗಿದ್ದು, ಶುಕ್ರವಾರ ಮಾರ್ನಿಂಗ್ ಶೋನಿಂದಲೇ ಚಿತ್ರ ವೀಕ್ಷಣೆಗೆ ಡಿ ಬಾಸ್ ಅಭಿಮಾನಿಗಳು ಮುಗಿಬಿದ್ದರು. ಕೆಲವರು ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಬಂದು ಚಿತ್ರ ವೀಕ್ಷಿಸಿದರು. ವೀರಭದ್ರೇಶ್ವರ ಚಿತ್ರಮಂದಿರ ಎದುರು ದರ್ಶನ್ ಕಟೌಟ್ ಮತ್ತು ಬ್ಯಾನರ್‌ಗಳು ರಾರಾಜಿಸಿದವು. ದರ್ಶನ ಅಭಿಮಾನಿಗಳು ಬಿರಿಯಾನಿ ಹಂಚುವ ಮೂಲಕ ಸಂಭ್ರಮಿಸಿದರು.