ಜಿಲ್ಲೆ

ಬೀರೂರು ಪುರಸಭೆ ಸ್ಥಾಯಿ ಸಮಿತಿಗೆ ಜಿ.ಲಕ್ಷ್ಮಣ್ ಅಧ್ಯಕ್ಷ

ಬೀರೂರು: ಬೀರೂರು ಪುರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಜಿ.ಲಕ್ಷ್ಮಣ್ ಅವಿರೋಧವಾಗಿ ಆಯ್ಕೆಯಾದರು. ಬಿ.ಆರ್.ಮೋಹನ್ ಕುಮಾರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪುರಸಭೆಯಲ್ಲಿ ನಡೆದ ನಡೆದ ಚುನಾವಣೆಗೆ ಜಿ.ಲಕ್ಷ್ಮಣ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಅವರು ಜಿ.ಲಕ್ಷ್ಮಣ್ ಅವರ ಅವಿರೋಧ ಆಯ್ಕೆ ಘೋಷಿಸಿದರು. ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರ ಪಡೆದು ಪಟ್ಟಣದ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಶ್ರಮಿಸಲಾಗುವುದು ಎಂದರು.

ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯರಾದ ಬಿ.ಕೆ.ಶಶಿಧರ್, ಲೋಕೇಶಪ್ಪ, ಭಾಗ್ಯಲಕ್ಷ್ಮೀ, ನಂದಿನಿ, ಸಹನಾ, ಸುಮಿತ್ರಾ, ಬಿ.ಆರ್.ಮೋಹನ್ ಕುಮಾರ್, ಮಾನಿಕ್ ಬಾಷಾ, ರಾಜು, ಶಾರದಾ, ಗಂಗಾಧರ ಇದ್ದರು.