ಬೀರೂರಿನ ಬಿ.ಎಚ್.ರಸ್ತೆಯಲ್ಲಿ ಶುಕ್ರವಾರ ಸುರಿದ ಮಳೆಗೆ ರಸ್ತೆ ಜಲಾವೃತಗೊಂಡಿರುವುದು. 
ಜಿಲ್ಲೆ

ಬೀರೂರಲ್ಲಿ ವರ್ಷಧಾರೆ ಸಂಭ್ರಮ

ಜಿ.ಹೆಚ್. ಧನ್ಯಕುಮಾರ್

ಬೀರೂರು: ಹೋಬಳಿಯಾದ್ಯಂತ ಶುಕ್ರವಾರ ಸಂಜೆ ಭರಣಿ ಮಳೆ ಉತ್ತಮವಾಗಿ ಸುರಿದು ಭೂಮಿಯನ್ನು ತಂಪಾಗಿಸಿತು. ಗುಡುಗು, ಮಿಂಚು ಸಹಿತ ಸುರಿದ ಮಳೆಗೆ ಪಟ್ಟಣದ ಚರಂಡಿಗಳು ಜಲಾವೃತಗೊಂಡು ನೀರು ಮುಖ್ಯರಸ್ತೆಗಳಲ್ಲಿ ಹರಿಯಿತು. ಮಳೆಯಿಂದ ಬಿಸಿಲಿನಿಂದ ಕಾದ ಭೂಮಿ ತಂಪಾಯಿತು. ಮಳೆಯಿಂದಾಗಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದ ಅಡಕೆ, ತೆಂಗು ಬೆಳೆಗಾರರು ತುಸು ನಿಟ್ಟುಸಿರು ಬಿಟ್ಟಿದ್ದಾರೆ.