ಸುಳ್ಯ: ಪ್ರೆಸ್‌ಕ್ಲಬ್ ನೇತೃತ್ವದಲ್ಲಿ, ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಾಗೂ ಗಾಂಧಿ ಚಿಂತನ ವೇದಿಕೆ ಸುಳ್ಯ ಸಹಯೋಗದಲ್ಲಿ, ಸುಳ್ಯದ ಶಿಲ್ಪಿ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ 15ನೇ ವರ್ಷದ ಭವ್ಯ ಸುಳ್ಯ ಸಂಕಲ್ಪ ದಿನಾಚರಣೆ ಗುರುವಾರ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಡಾ.ಕುರುಂಜಿ ಪುತ್ಥಳಿ ಬಳಿ ನಡೆಯಿತು.
ಸ್ವಚ್ಛತೆ ಜಾಗೃತಿ ಮೂಡಿಸುವ ಪ್ರಭಾಕರ ನಾಯರ್ ಅವರನ್ನು ಸನ್ಮಾನಿಸಲಾಯಿತು. ಸುಳ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ನ.ಪಂ. ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿಯ ಸ್ಥಾಪಕಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೆ.ವಿ.ಜಿ. ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಮುಖ್ಯ ಅತಿಥಿಗಳಾಗಿದ್ದರು.
ನ.ಪಂ. ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಸದಸ್ಯೆ ಶೀಲಾ ಕುರುಂಜಿ, ಪ್ರಮುಖರಾದ ದೊಡ್ಡಣ್ಣ ಬರೆಮೇಲು, ವೀರಪ್ಪ ಗೌಡ ಕಲ್ಕಲ್, ಆನಂದ ಖಂಡಿಗ, ದಿನೇಶ್ ಅಂಬೆಕಲ್ಲು, ಡಾ.ಕೆ.ಟಿ.ವಿಶ್ವನಾಥ, ವಿಶ್ವನಾಥ ನಾಯರ್, ಸುಳ್ಯಕೋಡಿ ಮಾಧವ ಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಕಾರ್ಯದರ್ಶಿ ಗಣೇಶ್ ಕುಕ್ಕುದಡಿ ಮೊದಲಾದವರಿದ್ದರು.