ಚಿತ್ರದುರ್ಗ: ಅಹಿಂಸೆಯ ಮಾರ್ಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿರುವ ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಅನುಸರಿಸಿದರೆ ದೇಶ ಶಾಂತಿಯುತವಾಗಿರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಗಾಂಧಿ ಹಾಗೂ ಲಾಲ್‌ಬಹದ್ದೂರ್‌ಶಾಸ್ತ್ರಿ ಅವರ ಜಯಂತಿಯಲ್ಲಿ ಇಬ್ಬರು ಮಹ ನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಗಾಂಧೀಜಿ ಬ್ರಿಟಿಷರ ವಿರುದ್ಧ ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಹೋರಾಡಿದರು. ಸರಳತೆಯನ್ನು ರೂಢಿಸಿಕೊಂಡಿದ್ದ,ಗಾಂಧಿ ಎಂದಿಗೂ ಹಿಂಸೆಯನ್ನು ಪ್ರಚೋಧಿಸಿದವರಲ್ಲ. ಸತ್ಯ ಮತ್ತು ಅಹಿಂಸೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸ್ವಾತಂತ್ರಕ್ಕಾಗಿ ಹೋರಾಡಿದ್ದರ ಎಂದು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಸ್.ಕುಮಾರ್‌ಗೌಡ ಮಾತನಾಡಿ,ಪ್ರಧಾನಿಯಾಗಿದ್ದರೂ ಲಾಲ್‌ಬಹದ್ದೂರ್‌ಶಾಸ್ತ್ರಿ ಅವರು ಐಷಾ ರಾಮಿ ಜೀವನದಿಂದ ದೂರವಿದ್ದವರು ಎಂದರು. ಉಪಾಧ್ಯಕ್ಷ ಎನ್‌ಬಿಟಿ ಜಮೀರ್ ಮಾತನಾಡಿದರು.ಕೆ.ಪಿ.ಸಂಪತ್‌ಕುಮಾರ್, ಡಿ.ಎನ್. ಮೈಲಾರಪ್ಪ,ಮುನಿರಾ ಎ.ಮಕಾಂದಾರ್,ಹನುಮಲಿ ಷಣ್ಮುಖಪ್ಪ,ಎನ್.ಡಿ.ಕುಮಾರ್,ಜಯಣ್ಣ ಮತ್ತಿತರರು ಇದ್ದರು.