ಜಿಲ್ಲೆ

ಪೊಲೀಸ್ ಠಾಣೆಯಲ್ಲಿ ಬಾಲಕನ ಬರ್ತ್ ಡೇ!

Dakshina Kannada

ಮಂಜೇಶ್ವರ: ಜನ್ಮದಿನವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂಬ ಸ್ಥಳೀಯ ಬಾಲಕನ ಆಸೆಯನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣೆಯ ಪೊಲೀಸರು ಈಡೇರಿಸಿದ್ದಾರೆ.

ವರ್ಕಾಡಿಯ ಅಜೀಜ್ ಕಲ್ಲೂರು-ಆರಿಫಾ ದಂಪತಿ ಪುತ್ರ, ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲ ಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶೀಲ್ ಶನಿವಾರ ತನ್ನ 6ನೇ ವಷರ್ದ ಹುಟ್ಟುಹಬ್ಬವನ್ನು ಮಂಜೇಶ್ವರ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದ್ದಾನೆ.

ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂದು ಆಶೀಲ್ ಪಟ್ಟು ಹಿಡಿದಾಗ ತಂದೆ ಅಜೀಜ್ ಕಲ್ಲೂರು ಮಂಜೇಶ್ವರ ಠಾಣೆಯ ‘ಜನಪರ ಪೊಲೀಸರನ್ನು’ ಸಂಪರ್ಕಿಸಿದರು. ಆಶೀಲ್‌ನ ಆಸೆಯಂತೆ ಮಂಜೇಶ್ವರ ಠಾಣೆಯಲ್ಲಿ ಜನ್ಮದಿನ ಆಚರಿಸಲು ಪೊಲೀಸರು ಅವಕಾಶ ಮಾಡಿಕೊಟ್ಟರು.

ಮಂಜೇಶ್ವರ ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ಎಸ್‌ಐ ಟೋನಿ, ಅನ್ಸಾರ್ ಸಹಿತ ಠಾಣೆಯ ಪೊಲೀಸರು ಆಶೀಲ್‌ಗೆ ಶುಭ ಹಾರೈಸಿದರು.