ಜಿಲ್ಲೆ

ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜನ್ಮದಿನ ಆಚರಣೆ

ಇಂದಿರಾ ಎನ್ ಕೆ

ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸಿ ಜನ್ಮದಿನ ಆಚರಿಸಲಾಯಿತು.

ಉಡುಪಿ ಜಿಲ್ಲಾ ಸ್ಕೌಟ್ಸ್ ಕಾರ್ಯದರ್ಶಿ ಆನಂದ ಅಡಿಗ ಉದ್ಘಾಟಿಸಿದರು. ವಿದ್ಯಾರ್ಥಿಗಳಾದ ಆರಾಧ್ಯಾ ಕೆ.ಬಿ., ಜೀವಿಕಾ, ಶ್ರಾವಣಿ ಹಾಗೂ ನವನೀತಾ ಅವರು ಗಾಂಧಿ ಮತ್ತು ಶಾಸಿ ಜಯಂತಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಂದೀಪ್ ಗಾಣಿಗ, ಉಪಪ್ರಾಂಶುಪಾಲ ಸುಜಯ್ ಕೋಟೆಗಾರ್, ಪ್ರೌಢಶಾಲಾ ಮುಖ್ಯಶಿಕ್ಷಕ ಕೃಷ್ಣ ಅಡಿಗ, ಕಿರಿಯ ಪ್ರಾಥಮಿಕ ವಿಭಾಗ ಮುಖ್ಯಶಿಕ್ಷಕಿ ರೇಷ್ಮಾ ಡಿಸೋಜ, ಪೂರ್ವ ಪ್ರಾಥಮಿಕ ವಿಭಾಗ ಮುಖ್ಯಶಿಕ್ಷಕಿ ಪ್ರಮೀಳಾ ಡಿಸೋಜ ಹಾಗೂ ಸ್ಕೌಟ್ಸ್ ಶಿಕ್ಷಕ ಸುಬ್ರಹ್ಮಣ್ಯ, ಸ್ಕೌಟ್ಸ್ ಗೈಡ್ಸ್, ಎನ್‌ಸಿಸಿ, ಶಾಲಾ ಮಕ್ಕಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕಬ್ಸ್ ಶಿಕ್ಷಕಿ ಸುನೀತಾ ಸ್ವಾಗತಿಸಿದರು. ಶಿಕ್ಷಕಿ ಅಶ್ವಿನಿ ವಂದಿಸಿದರು. ಬುಲ್ ಬುಲ್ ಶಿಕ್ಷಕಿ ಪದ್ಮಾವತಿ ನಿರೂಪಿಸಿದರು.