ಜಿಲ್ಲೆ

ಜನ್ಮದಿನದ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಯದುವೀರ್ ತುಲಾಭಾರ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಭಾನುವಾರ ತುಲಾಭಾರ ಸೇವೆ ಮಾಡಿಸಿದರು.

ನಗರದ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಪಿಂಜರಾಪೋಲ್ ಆವರಣದಲ್ಲಿ ಬೆಳಗಿನ ಸಮಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯದುವೀರ್ ಅವರು ಗೋವು ಪೂಜೆ ಮಾಡಿದರು. ಹಸುವಿಗೆ ಕಬ್ಬು, ಬೆಲ್ಲವನ್ನು ತಿನಿಸಿದರು. ಬಳಿಕ ಬೆಲ್ಲದ ಪಿಂಡಿಯ ತುಲಾಭಾರ ಸೇವೆಯನ್ನು ಮಾಡಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎನ್.ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.