ಜಿಲ್ಲೆ

ಆಂಬುಲೆನ್ಸ್‌ನಲ್ಲಿ ಅವಳಿ ಮಕ್ಕಳ ಜನನ

ಸೋಮನಾಥ ರೆಡ್ಡಿ

ಕುಂದಗೋಳ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರು 108 ಆಂಬುಲೆನ್ಸ್‌ನಲ್ಲೇ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಘಟನೆ ದೇವನೂರು ಕುಂದಗೋಳ ಮಾರ್ಗ ಮಧ್ಯೆ ಬುಧವಾರ ಬೆಳಗಿನ ಜಾವ ನಡೆದಿದೆ.

ತಾಲೂಕಿನ ದೇವನೂರು ಗ್ರಾಮದ ಅಕ್ಕಮಹಾದೇವಿ ಗೋಡಿ ಎಂಬುವವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು 108 ಆಂಬುಲೆನ್ಸ್‌ನಲ್ಲಿ ಕುಂದಗೋಳದ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಹೆರಿಗೆಯಾಗಿದೆ.

ಆಂಬುಲೆನ್ಸ್ ನರ್ಸಿಂಗ್ ಆಫಿಸರ್ ಪರಶುರಾಮ ಚಂದಾವರಿ ಅವರು ಹೆರಿಗೆ ಮಾಡಿಸಿದರು. ಆಂಬುಲೆನ್ಸ್ ಚಾಲಕ ಸೋಮಪ್ಪ ಹಾಗೂ ಆಶಾ ಕಾರ್ಯಕರ್ತೆ ಶಾಂತಾ ಕಮಡೊಳ್ಳಿ ಸಹಾಯ ಮಾಡಿದರು.

ನಂತರ ತಾಯಿ ಹಾಗೂ ಮಕ್ಕಳನ್ನು ಕುಂದಗೋಳ ತಾಲೂಕು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ತಾಯಿ- ಮಕ್ಕಳ ಆರೋಗ್ಯ ತಪಾಸಣೆ ಮಾಡಿದ ವೈದ್ಯ ಗಿರೀಶ ಮರಡ್ಡಿ ಅವರು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.