ನಾಯಕನಹಟ್ಟಿ: ಗರ್ಭಿಣಿಯನ್ನು ಜಿಲ್ಲಾಸ್ಪತ್ರೆಗೆ 108 ಆಂಬುಲೆನ್ಸ್‌ನಲ್ಲಿ ಕರೆದೊಯುತ್ತಿದ್ದ ಸಂದರ್ಭ ಹೆರಿಗೆ ನೋವು ತೀವ್ರಗೊಂಡ ತಕ್ಷಣ ಮಾರ್ಗಮಧ್ಯದಲ್ಲೇ ಸಿಬ್ಬಂದಿ ಹೆರಿಗೆ ಮಾಡಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದೆ.
ಮನುಮೈನಹಟ್ಟಿ ಗ್ರಾಮದ ಸುಚಿತ್ರಾ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ. ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಶಾ ಕಾರ್ಯಕರ್ತೆ ತಿಪ್ಪಮ್ಮ 108 ಆಂಬುಲೆನ್ಸ್ ವಾಹನ ಗ್ರಾಮಕ್ಕೆ ಕರೆಯಿಸಿಕೊಂಡು ಜಿಲ್ಲಾಸ್ಪತ್ರೆಗೆ ಹೊರಟಿದ್ದಾರೆ.
ಗೋನೂರು ಬಳಿ ಹೆರಿಗೆ ನೋವು ತೀವ್ರಗೊಂಡಿದ್ದು, ಸಿಬ್ಬಂದಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಹೆರಿಗೆ ಮಾಡಿಸಿದ್ದು, ಮಗು ಮತ್ತು ತಾಯಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವಾಹನ ಚಾಲಕ ಜಿ.ಬಿ.ಚಿದಾನಂದ್, ತುರ್ತು ಚಿಕಿತ್ಸಾ ತಂತ್ರಜ್ಞ ಎಂ.ಪ್ರಹ್ಲಾದ್, ಆಶಾ ಕಾರ್ಯಕರ್ತೆ ತಿಪ್ಪಮ್ಮ ಕಾರ್ಯಕ್ಕೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.