ಕೊಳ್ಳೇಗಾಲ : ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂಭಾಗ ಬುಧವಾರ ಮಾಜಿ ಸಂಸದ ದಿ.ವಿ.ಶ್ರೀನಿವಾಸ್ ಪ್ರಸಾದ್ ಅವರ 78ನೇ ಜನ್ಮ ದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಮಾಜಿ ಅಧ್ಯಕ್ಷ ರಮೇಶ್ ನೇತೃತ್ವದಲ್ಲಿ ನಗರಸಭಾ ಸದಸ್ಯರು, ತಾಲೂಕು ವಕೀಲ ಸಂಘದ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಅಭಿಮಾನಿಗಳು ಅಂಬೇಡ್ಕರ್ ಪ್ರತಿಮೆ ಮಾಲಾರ್ಪಣೆ ಮಾಡಿದ ಬಳಿಕ ಮಾಜಿ ಸಂಸದ ದಿ.ವಿ. ಶ್ರೀನಿವಾಸ್ ಪ್ರಸಾದ್ ಜನ್ಮದಿನ ಆಚರಣೆ ಮಾಡಿದರು. ಈ ವೇಳೆ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭ ನಗರಸಭೆ ಅಧ್ಯಕ್ಷೆ ಸಿ.ಎನ್.ರೇಖಾ ರಮೇಶ್ ಮಾತನಾಡಿ, ಶ್ರೀನಿವಾಸ ಪ್ರಸಾದ್ ಹಳೇ ಮೈಸೂರು ಭಾಗದ ರಾಜಕೀಯ ನಾಯಕರಾಗಿದ್ದರು. ಕೇಂದ್ರ ಹಾಗೂ ರಾಜ್ಯ ಸಚಿವರಾಗಿ,ಸಂಸದರಾಗಿ
ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಂತಹ ಧೀಮಂತ ನಾಯಕ ನಮ್ಮ ನಡುವೆ ಇಲ್ಲದಿದ್ದರೂ ಅವರ ಸೇವೆ ಜೀವಂತವಾಗಿದೆ ಎಂದರು.
ನಗರಸಭೆ ಸದಸ್ಯರಾದ ಶಾಂತರಾಜು, ಪ್ರಕಾಶ್, ರಾಘವೇಂದ್ರ, ನಾಮ ನಿರ್ದೇಶಿತ ಸದಸ್ಯ ಸ್ವಾಮಿ ನಂಜಪ್ಪ, ಗ್ಯಾರೇಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ರವಿ ಬಸ್ತೀಪುರ, ವಕೀಲ ಸಂಘದ ಬಸವರಾಜು, ಉಪಾಧ್ಯಕ್ಷೆ ಸೀಮಾ ತಾಸೀನ್, ಖಂಜಾಚಿ ಅಮೃತ್, ಹಿರಿಯ ವಕೀಲ ಮಲ್ಲಿಕಾರ್ಜುನ, ವಕೀಲ ಭೀಮರಾವ್, ಮುಖಂಡರಾದ ನಡರಾಜು, ಚಿಕ್ಕಮಾಳಿಗೆ, , ಜಗದೀಶ್, ಪ್ರಭುಸ್ವಾಮಿ, ದಿಲೀಪ್, ಜಗದೀಶ್ ಇತರರು ಇದ್ದರು.