ಜಿಲ್ಲೆ

ಶ್ರೀ ಸಿದ್ಧಾರೂಢ ಸ್ವಾಮಿಗಳ ಜನ್ಮೋತ್ಸವ

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಗಳ 190 ನೇ ಜನ್ಮೋತ್ಸವವನ್ನು ಭಾನುವಾರ ಅದ್ದೂರಿಯಾಗಿ ಆಚರಿಸಲಾಯಿತು.

ಬೆಳಗ್ಗೆ ಉಭಯಶ್ರೀಗಳ ಗದ್ದುಗೆಗಳಿಗೆ ಅಭಿಷೇಕ, ಮಧ್ಯಾಹ್ನ ಸುಮಂಗಲೆಯರಿಗೆ ಉಡಿತುಂಬುವುದು, ಶ್ರೀಗಳ ಉತ್ಸವ ಮೂರ್ತಿಯ ಪಲ್ಲಕ್ಕಿಯು ವಾದ್ಯಮೇಳಗಳೊಂದಿಗೆ ಹೊರಟು ನಗರದಲ್ಲಿ ಸಂಚರಿಸಿ ಬಂದ ನಂತರ ಸಂಜೆ 5.30ಕ್ಕೆ ಕುಂಭಹೊತ್ತ ಮಹಿಳೆಯರು ಶ್ರಿಮಠಕ್ಕೆ ಬರಮಾಡಿಕೊಂಡರು.

ಶ್ರೀಮಠದ ಕೈಲಾಸಮಂಟಪದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮಕ್ಕೆ ಶ್ರೀಮಠದ ಚೇರ್ಮನ್ ಚನ್ನವೀರ ಮುಂಗುರವಾಡಿ ಚಾಲನೆ ನೀಡಿದರು.

ಟ್ರಸ್ಟ್ ಕಮಿಟಿಯ ವೈಸ್ ಚೇರ್ಮನ್ ವಿನಾಯಕ ಘೋಡಕೆ, ಗೌರವ ಕಾರ್ಯದರ್ಶಿಗಳಾದ ರಮೇಶ ಬೆಳಗಾವಿ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ಬಸವರಾಜ ಕಲ್ಯಾಣಶೆಟ್ಟರ್, ಡಾ. ಗೋವಿಂದ ಮಣ್ಣೂರ, ಸರ್ವಮಂಗಳಾ ಪಾಠಕ, ವಸಂತ ಸಾಲಗಟ್ಟಿ, ಉದಯಕುಮಾರ ನಾಯ್ಕ, ಗೀತಾ ಕಲಬುರ್ಗಿ, ವ್ಯವಸ್ಥಾಪಕ ಈರಣ್ಣ ತುಪ್ಪದ ಇತರರು ಇದ್ದರು.