ಚಿತ್ರದುರ್ಗ: ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಜು.10 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿವ ಶರಣ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಡಿಸಿ ಕಚೇರಿ ತಹಸೀಲ್ದಾರ್ ಸಿದ್ದೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶಿವಶರಣ ಅಪ್ಪಣ್ಣನವರ ಜೀವನ, ವಚನ ಹಾಗೂ ತತ್ವಗಳು ಸಾರುವ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಲಾಗುವುದು. ಹಡಪದ ಸಮಾಜದವರು ಹಾಗೂ ಸಾರ್ವ ಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಸಬೇಕು ಎಂದು ಸಿದ್ದೇಶ್ ಕೋರಿದರು.
ಹಡಪದ ಅಪ್ಪಣ್ಣ ಹಾಗೂ ಇತರ ವಚನಕಾರರ ವಚನಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್ ಸಭೆತಿಳಿಸಿದರು.
ಜಿಲ್ಲಾ ಹಡಪ ಸಮಾಜದ ಅಧ್ಯಕ್ಷ ನಾಗರಾಜಪ್ಪ, ಕಾರ್ಯದರ್ಶಿ ಎ.ಆರ್. ವೀರಭದ್ರಪ್ಪ, ನಿರ್ದೇಶಕ ವೇದಮೂರ್ತಿ, ತಾಲೂಕು ಅಧ್ಯಕ್ಷ ವೃಷಭೇಂದ್ರಪ್ಪ, ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ್ ಮತ್ತಿತರರು ಇದ್ದರು.
---