ಜಿಲ್ಲೆ

ಬಿರ್ಸಾ ಮುಂಡಾ ನಾಯಕತ್ವದ ಗುಣ ಪ್ರೇರಣೆಯಾಗಲಿ: ಗಜಾನನ ಬಾಲೆ

ರಾಯಚೂರು: ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಬಿರ್ಸಾ ಮುಂಡಾ ಬ್ರಿಟೀಷರ ವಸಹಾತುಶಾಹಿ ಶೋಷಣೆಯ ವಿರುದ್ಧ ಹೋರಾಡುವ ಮೂಲಕ ಅಪ್ರತಿಮ ಸ್ವಾತಂತ್ರೃ ಹೋರಾಟಗಾರರಾಗಿದ್ದರು ಎಂದು ಎಸಿ ಗಜಾನನ ಬಾಲೆ ಹೇಳಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾರ 150 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

1890ರ ದಶಕದಲ್ಲಿ ಬಿರ್ಸಾ ಮುಂಡಾ ತಮ್ಮ 25ನೇ ವಯಸ್ಸಿಗೆ ಬ್ರಿಟಿಷರ ಶೋಷಣೆಯ ವಿರುದ್ಧ ಹೋರಾಟ ಮಾಡಿದ್ದರು. ಬ್ರಿಟಿಷ್ ಅಧಿಕಾರಿಗಳು ತಮ್ಮ ಬುಡಕಟ್ಟು ಜನಾಂಗದವರ ಮೇಲೆ ಶೋಷಣೆಗೆ ಮುಂದಾದಾಗ ಅವರ ಭೂಮಿ, ಆಚಾರ, ವಿಚಾರಗಳ ಉಳಿಸಲು ಹಾಗೂ ಹಕ್ಕುಗಳಿಗೆ ಹೋರಾಟ ಮಾಡಿದ್ದರು. ಇತಿಹಾಸದಲ್ಲಿ ಬಿರ್ಸಾ ಮುಂಡಾರ ಧೈರ್ಯ, ಸಾಹಸ ಮತ್ತು ನಾಯಕತ್ವದ ಗುಣಗಳು ಯುವಕರಿಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪುರೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸಿ.ಶ್ರೀಶೈಲ, ತಾಲೂಕಾಧಿಕಾರಿ ರುಕ್ಮಿಣಿ ಪಾಟೀಲ್, ಹೈ.ಕ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ರಘುವೀರ ನಾಯಕ ಸೇರಿದಂತೆ ಇತರರಿದ್ದರು.