ಯಕ್ಸಂಬಾ ಪಟ್ಟಣದ ಬೀರೇಶ್ವರ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಅಪ್ಪಾಸಾಹೇಬ ಜೊಲ್ಲೆ, ಆನಂದ ಪಾಟೀಲ ಇದ್ದರು. 
ಜಿಲ್ಲೆ

ಬೀರೇಶ್ವರ ಸಹಕಾರಿಗೆ 45.35 ಕೋಟಿ ರೂ. ಲಾಭ: ಅಣ್ಣಾಸಾಹೇಬ ಜೊಲ್ಲೆ

ಚಿಕ್ಕೋಡಿ ಗ್ರಾಮೀಣ: ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ&ಆಪ್​ ಕ್ರೆಡಿಟ್​ ಸೊಸೈಟಿ ಸಂಸ್ಥೆ (ಮಲ್ಟಿಸ್ಟೇಟ್​)ಯು 2024&25ನೇ ಸಾಲಿನ ಆರ್ಥಿಕ ವರ್ಷದಲ್ಲಿ 45.35 ಕೋಟಿ ರೂ. ಲಾಭ ಗಳಿಸಿದೆ ಎಂದು ಜೊಲ್ಲೆ ಗ್ರೂಪ್​ ಸಂಸ್ಥೆಗಳ ಸಂಸ್ಥಾಪಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ನೂತನ ಆಡಳಿತ ಕಚೇರಿ ಸಭಾಗಹದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಬೀರೇಶ್ವರ ಸಹಕಾರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ವರ್ಷದಿಂದ ವರ್ಷಕ್ಕೆ ಸದೃಢವಾಗಿ ಬೆಳೆಯುತ್ತಿದೆ. ಅಂತಾರಾಜ್ಯ ಕಾಯ್ದೆಯಡಿ ಕರ್ನಾಟಕದಲ್ಲಿ 176, ಮಹಾರಾಷ್ಟ್ರದಲ್ಲಿ 46 ಹಾಗೂ ಗೋವಾದಲ್ಲಿ 4 ಸೇರಿ 226 ಶಾಖೆ ಹೊಂದಿದೆ. ಕಳೆದ ವರ್ಷಕ್ಕಿಂತ 4.79 ಕೋಟಿ ರೂ. ಲಾಭಾಂಶದಲ್ಲಿ ಹೆಚ್ಚಳವಾಗಿದೆ. ಜತೆಗೆ ಹೆಚ್ಚಿನ ಶಾಖೆ ಪ್ರಾರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರ ಇಲಾಖೆ ಅನುಮತಿ ನೀಡಿದೆ ಎಂದರು.

ಸಹಕಾರಿಯಲ್ಲಿ 4,08,233 ಸದಸ್ಯರು, 34,92,16,400,00 ಷೇರು ಬಂಡವಾಳ, 4338.58 ಕೋಟಿ ರೂ. ಮೀರಿದ ಠೇವು ಸಂಗ್ರಹ, 5030.90 ಕೋಟಿ ರೂ. ದುಡಿಯುವ ಬಂಡವಾಳ ಇದೆ ಎಂದರು. ಸಂಸ್ಥೆಯಿಂದ ಸಿಬ್ಬಂದಿಗೆ ಕ್ವಾರ್ಟ್​ರ್ಸ್​ ವ್ಯವಸ್ಥೆ, ಉತ್ತಮ ವೇತನ, ವಿಮೆ ಸೌಲಭ್ಯ ಹಾಗೂ ಪಿಂಚಣಿ ವ್ಯವಸ್ಥೆಯನ್ನು ಸಹಕಾರಿ ೇತ್ರದಲ್ಲಿ ಪ್ರಥಮವಾಗಿ ತಂದಿದ್ದೇವೆ ಎಂದು ತಿಳಿಸಿದರು.

ಎಸ್​ಎಂಎಸ್​ ಸೇವೆ, ಕಿರು ಸಾಲ ಯೋಜನೆ, ವೆಸ್ಟರ್ನ್​ ಯೂನಿಯನ್​ ಮನಿ ಟ್ರಾನ್ಸ್​ರ್​, ಎಕ್ಸಪ್ರೆಸ್​ ಮನಿ ಟ್ರಾನ್ಸ-ರ್​, ಷೇರು ಮಾರುಕಟ್ಟೆ, ಡಿಮ್ಯಾಟ್​ ಅಕೌಂಟ್​, ಪಾನ್​ ಕಾರ್ಡ್​, ಸ್​ೇ ಡಿಪಾಸಿಟ್​ ಲಾಕರ್​, ಜೀವ ವಿಮೆ, ಟಿಕೆಟ್​ ಬುಕ್ಕಿಂಗ್​ ಮತ್ತು ಇ&ಸ್ಟಾ$ಂಪ್​ ಸೌಲಭ್ಯ ಸೇರಿ ಇತರ ಸೇವೆ ಒದಗಿಸಲಾಗುತ್ತಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಬಹದ್ದೂರ ಗುರವ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ವೆಸ್​ ಚೇರ್ಮನ್​ ಆನಂದ ಪಾಟೀಲ, ನಿರ್ದೇಶಕ ಮಂಡಳಿ ಸದಸ್ಯರು, ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ, ರಮೇಶ ಕುಂಬಾರ, ಎಸ್​.ಕೆ. ಮಾನೆ, ಶಿವಪುತ್ರ ಡಬ್ಬ, ಶೇಖರ ಪಾಟೀಲ, ಪ್ರವಿಣ ತೋರಿ ಇತರರಿದ್ದರು.