ಮುಳಬಾಗಿಲು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟ ಬೆನ್ನಲ್ಲೇ ಈಗ ಮುಳಬಾಗಿಲಿನಲ್ಲೂ ಭೀತಿ ಆವರಿಸಿದೆ.
ಹೌದು. ನಗರದಲ್ಲಿ ಪಯೊಂದು ಸತ್ತು ಬಿದ್ದಿರುವುದೇ ಈ ಅನುಮಾನಕ್ಕೆ ಕಾರಣವಾಗಿದೆ.
ನಗರ ಹೊರವಲಯದ ಹೆದ್ದಾರಿಯ ಮರವೊದರ ಬಳಿ ಸಾಂಬಾರ್ ಕಾಗೆಯೊಂದು ಸತ್ತು ಬಿದ್ದಿದೆ.ಈ ಸಂಬಂಧ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಸಂಬಂಧಿಸಿದ ಇಲಾಖೆ ಮತ್ತು ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ವಹಿಸುವ ಜತೆಗೆ ಸತ್ತ ಪಕ್ಷಿಯನ್ನು ಲ್ಯಾಬ್ ಪರೀಕ್ಷೆ ಮಾಡಿಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪಶುಪಾಲನೆ ಇಲಾಖೆಗೆ ಅಧಿಕಾರಿಗಳ ಗಮನಕ್ಕೆ ತಂದು, ಅವರ ವರದಿ ಮೇರೆಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸರ್ಕಾರದ ಸೂಚನೆಯಂತೆ ಕ್ರಮ ವಹಿಸಲಾಗುವುದು.
- ವಿ. ಗೀತಾ, ತಹಸೀಲ್ದಾರ್, ಮುಳಬಾಗಿಲು.
ಸಾಮಾನ್ಯವಾಗಿ ಹಕ್ಕಿ ಜ್ವರ ಬಂದರೆ ಹಲವು ಹಕ್ಕಿಗಳು ಸಾಯುತ್ತವೆ. ಒಂದು ಪಕ್ಷಿ ಮೃತಪಟ್ಟಿದ್ದು, ಆ ರೀತಿ ಪ್ರಕರಣ ಇರುವುದಿಲ್ಲ ಎಂಬ ನಂಬಿಕೆ ಇದೆ. ಆದರೂ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ಡಾ. ಅನುರಾಧಾ
ಸಹಾಯಕ ನಿರ್ದೇಶಕಿ, ಪಶುಪಾಲನೆ ಇಲಾಖೆ, ಮುಳಬಾಗಿಲು
ಪಕ್ಷಿ ಸತ್ತು ಬಿದ್ದಿರುವುದು ತಡವಾಗಿ ತಿಳಿದು ಬಂದಿದೆ. ಪಶುಪಾಲನೆ ಇಲಾಖೆಗೆ ಸೂಚನೆ ನೀಡಿ ನಾಳೆ ಸಂಪೂರ್ಣ ವರದಿ ಪರಿಶೀಲಿಸಲಾಗುವುದು.
- ಡಾ. ಕೆ. ಸರ್ವೇಶ್
ಇಒ, ತಾಪಂ, ಮುಳಬಾಗಿಲು