ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಆರ್ ಮಾತನಾಡಿದರು. ಪ್ರೊ.ಪಿ.ಜಿ. ತಡಸದ, ಡಾ. ಬಾಬು. ಸಜ್ಜನ, ಬಾಬು ಚವ್ಹಾಣ್ ಮತ್ತಿತರರಿದ್ದಾರೆ.  
ಜಿಲ್ಲೆ

ಜೈವಿಕ ಇಂಧನಕ್ಕೆ ಪ್ರೋತ್ಸಾಹ ಅಗತ್ಯ

Vijyapura - Parsuram Bhasagi

ವಿಜಯಪುರ: ಜೈವಿಕ ಇಂಧನದ ಮಹತ್ವ, ತಯಾರಿಕೆ, ಬಳಕೆ ಹಾಗೂ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವನಿತಾ ಆರ್ ತಿಳಿಸಿದರು.

ನಗರ ಹೊರವಲಯದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಇಸ್ಕಾ ವಿಜಯಪುರ ಚಾಪ್ಟರ್, ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ಗ್ರಾಮೀಣ ಅಭಿವೃದ್ಥಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೈವಿಕ ಇಂಧನ ಬಳಸುವುದರಿಂದ ಪರಿಸರ ಮಾಲಿನ್ಯ ಕಡಿಮೆಗೊಳ್ಳುತ್ತದೆ. ಜೊತೆಗೆ ದೇಶದ ಇಂಧನ ಅವಲಂಬನೆ ಪ್ರಮಾಣ ಕಡಿಮೆ ಗೊಳಿಸುತ್ತದೆ ಎಂದು ತಿಳಿಸಿದರು.

ಮಾಹಿತಿ ಹಾಗೂ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಜಿ. ತಡಸದ ಮಾತನಾಡಿ, ಅಂತರ ರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಗಳ ಬಗ್ಗೆ ವಿವರವಾಗಿ ತಿಳಿಸಿ ವಿದ್ಯಾರ್ಥಿನಿಯರಿಗೆ ದಿನಾಚರಣೆಯ ಮಹತ್ವ ಬಗ್ಗೆ ಹೇಳಿದರು. ವಿಜಯಪುರ ಗ್ರಾಮೀಣ ಅಭಿವೃದ್ಥಿ ಸಂಸ್ಥೆಯ ಅಧ್ಯಕ್ಷ ಡಾ. ಬಾಬು. ಸಜ್ಜನ ಜೈವಿಕ ಇಂಧನ ಕೇಂದ್ರದ ಕುರಿತು ಹಾಗೂ ಕೇಂದ್ರದ ಪ್ರಯೋಜನಗಳ ಬಗ್ಗೆ ತಿಳಿಸಿದರು.

ಸುಮಾರು ನೂರು ಜೈವಿಕ ಇಂಧನ ಸಂಬಂಧಿತ ಹೊಂಗೆ, ಬೇವು, ಸಿಮಾರೂಬಾ, ಹಿಪ್ಪೆ ಇತ್ಯಾದಿ ಸಸಿಗಳನ್ನು ನೆಡಲಾಯಿತು.
ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಬು ಚವ್ಹಾಣ್ ಹಾಗೂ ವಲಯ ಅರಣ್ಯ ಅಧಿಕಾರಿ ಗಿರೀಶ್ ಎಚ್. ಜೈವಿಕ ಮಾಹಿತಿ ತಂತ್ರಜ್ಞಾನ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕ ಡಾ. ಬಾಬು. ಆರ್. ಎಲ್. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.