ಜಿಲ್ಲೆ

ಜೈವಿಕ ಇಂಧನ ಸಂಶೋಧನೆ ಮಾಹಿತಿ, ಪ್ರಾತ್ಯಕ್ಷಿಕೆ

ಜಗದೀಶ ಹೊಂಬಳಿ

ಬೆಳಗಾವಿ: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಇ. ಸುಧೀಂದ್ರ ಅವರು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಂಡಳಿಯಿಂದ ಸ್ಥಾಪಿಸಲಾಗಿರುವ ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಕುಲಪತಿ ಡಾ. ಎಸ್. ವಿದ್ಯಾಶಂಕರ ವಿವಿಯ ಜೈವಿಕ ಇಂಧನ ಯೋಜನೆಗಳು ಮತ್ತು ಅದರ ಶೈಕ್ಷಣಿಕ ಉಪಕ್ರಮಗಳ ಅವಲೋಕನ ಒದಗಿಸಿದರು. ಕೇಂದ್ರದ ಸಂಯೋಜಕ ಡಾ. ನಾಗರಾಜ ಪಾಟೀಲ ಇದ್ದರು.