ಬಾಗಲಕೋಟೆ ನಗರದ ಬಿವಿವಿ ಸಂಘದ ಹಳೇ ಮೈದಾನದಲ್ಲಿ ಬಿಮ್ಸ್ ಕಪ್ 2023 ಅಂತರ್ ಕಾಲೇಜುಗಳ ಕ್ರಿಕೆಟ್ ಕ್ರೀಡಾ ಕೂಟಕ್ಕೆ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಚಾಲನೆ ನೀಡಿದರು. ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಎಸ್.ಎ ನಾವಲಗಿ, ಬಿಮ್ಸ್ ಪ್ರಾಚಾರ್ಯ ಡಾ. ಪ್ರಕಾಶ ವಡವಡಗಿ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್ ಮುಗನೂರಮಠ ಇತರರು ಇದ್ದರು. 
ಜಿಲ್ಲೆ

ಬಿಮ್ಸ್ ಕಪ್ 2023 ಕ್ರಿಕೆಟ್ ಕ್ರೀಡಾ ಕೂಟಕ್ಕೆ ಚಾಲನೆ

ಬಾಗಲಕೋಟೆ: ಬಿವಿವಿ ಸಂಘದ ಇನ್‌ಸ್ಟಿಟ್ಯೂಟ್ ಆ್ ಮ್ಯಾನೆಜ್‌ಮೆಂಟ್ ಸ್ಟಡೀಸ್ ವತಿಯಿಂದ ಆಯೋಜಿಸಲಾದ ಬಿಮ್ಸ್ ಕಪ್ 2023 ಅಂತರ್ ಕಾಲೇಜುಗಳ ಕ್ರಿಕೆಟ್ ಕ್ರೀಡಾ ಕೂಟಕ್ಕೆ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಲಿಂಗ ತಾರತಮ್ಯ ಹೋಗಲಾಡಿಸಿ ಕ್ರೀಡಾಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ 6 ಜನ ವಿದ್ಯಾರ್ಥಿಗಳು ಮತ್ತು 5 ಜನ ವಿದ್ಯಾರ್ಥಿನಿಯರನ್ನು ಒಳಗೊಂಡ ಟೀಮ್ ಗಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಸಂಘದ ವಿವಿಧ 6 ಕಾಲೇಜುಗಳಿಂದ ಒಟ್ಟು 8 ತಂಡಗಳು ಸೆಣಸಾಡಲಿದ್ದು ವಿಜೇತ ತಂಡಗಳಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ಸೇರಿದಂತೆ 9 ವಿವಿಧ ಹಂತದ ಬಹುಮಾನಗಳನ್ನು ನೀಡಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಎಸ್.ಎ ನಾವಲಗಿ, ಬಿಮ್ಸ್ ಪ್ರಾಚಾರ್ಯ ಡಾ. ಪ್ರಕಾಶ ವಡವಡಗಿ, ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್ ಮುಗನೂರಮಠ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಕ್ರೀಡಾಪಟುಗಳು ಹಾಜರಿದ್ದರು.